ಕೌಜಲಗಿ: ಭೌಗೋಳಿಕವಾಗಿ ಮೂರು ತಾಲ್ಲೂಕು ಆಗುವಷ್ಟು ಗೋಕಾಕ ದೊಡ್ಡದಾಗಿದೆ. ಇದನ್ನು ವಿಭಜಿಸಿ, ಪ್ರತ್ಯೇಕವಾಗಿ ಕೌಜಲಗಿ ತಾಲ್ಲೂಕು ರಚಿಸಬೇಕೆಂಬ ಬೇಡಿಕೆ ಐದು ದಶಕಗಳಿಂದ ಇದೆ. ಇಲ್ಲಿಗೆ ಸೋಮವಾರ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸ್ಪಂದಿಸುವರೇ ಎಂಬ ಕುತೂಹಲ ಮೂಡಿದೆ.

ಕೌಜಲಗಿ ಪ್ರತ್ಯೇಕ ತಾಲ್ಲೂಕಿಗಾಗಿ 1973ರಿಂದ ಹೋರಾಟ ನಡೆದಿದೆ. ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು 41 ಗ್ರಾಮ ಒಳಗೊಂಡು ಕೌಜಲಗಿಯನ್ನು ತಾಲ್ಲೂಕು ಕೇಂದ್ರ ರಚಿಸಬೇಕು ಎಂದು ಶಿಫಾರಸು ಮಾಡಿವೆ. ಇದಕ್ಕಾಗಿ ಜನರು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಬೇಡಿಕೆ ನನೆಗುದಿಗೆ ಬಿದ್ದಿದೆ.
‘ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆಗಾಗಿ ಸೋಮವಾರ ನಮ್ಮೂರಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ ಬಹುದಿನಗಳ ಬೇಡಿಕೆ ಈಡೇರಿಸಿ, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-ಎಂ.ಆರ್.ಭೋವಿ ಅಧ್ಯಕ್ಷ ನಿಯೋಜಿತ ಕೌಜಲಗಿ ತಾಲ್ಲೂಕು ಹೋರಾಟ ಸಮಿತಿಬೆಳಗಾವಿ ವಿಭಜಿಸಿ ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಗೋಕಾಕ ಜಿಲ್ಲೆ ಘೋಷಣೆಯಾಗುವ ಮುನ್ನ ಕೌಜಲಗಿ ತಾಲ್ಲೂಕು ಘೋಷಿಸಬೇಕು -ರಾಜೇಂದ್ರ ಸಣ್ಣಕ್ಕಿ -ಪ್ರಧಾನ ಕಾರ್ಯದರ್ಶಿ ನಿಯೋಜಿತ ಕೌಜಲಗಿ ತಾಲ್ಲೂಕು ಹೋರಾಟ ಸಮಿತಿಕೌಜಲಗಿ ತಾಲ್ಲೂಕು ರಚನೆಗೆ ಯಾರ ವಿರೋಧವೂ ಇಲ್ಲ. ಕೌಜಲಗಿಯನ್ನು ತಾಲ್ಲೂಕು ಆಗಿಸುವಂತೆ ವಿವಿಧ ಸಮಿತಿಗಳು ಶಿಫಾರಸು ಮಾಡಿವೆ. ಕೌಜಲಗಿ ತಾಲ್ಲೂಕು ರಚಿಸಿ ಹೊಸದಾಗಿ ರಚನೆಯಾಗಲಿರುವ ಗೋಕಾಕ ಜಿಲ್ಲೆಗೆ ಸೇರ್ಪಡಿಗೊಳಿಸಬೇಕು
Laxmi News 24×7