Breaking News

2A ಮೀಸಲಾತಿ ಬಗ್ಗೆ ಧ್ವನಿ ಎತ್ತದ ಶಾಸಕರ ವಿರುದ್ದ ಬಸವಜಯ ಮೃತ್ಯುಂಜಯ ಶ್ರೀ ಆಕ್ರೋಶ

Spread the love

2A ಮೀಸಲಾತಿ ಬಗ್ಗೆ ಧ್ವನಿ ಎತ್ತದ ಶಾಸಕರ ವಿರುದ್ದ ಬಸವಜಯ ಮೃತ್ಯುಂಜಯ ಶ್ರೀ ಆಕ್ರೋಶ

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತದ ಸಮುದಾಯದ ಶಾಸಕರ ವಿರುದ್ಧ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ ಆಕ್ರೋಶ ಹೊರಹಾಕಿದರು.

ಬೆಳಗಾವಿಯಲ್ಲಿಮಾತನಾಡಿದ ಅವರು, ಬೊಮ್ಮಾಯಿ, ಯಡಿಯೂರಪ್ಪ ಸರ್ಕಾರದಲ್ಲಿ ಸದನದ ಬಾವಿಗಿಳಿದು ಹೋರಾಟ ಮಾಡಿದ್ದೀರಿ.

ಆದರೆ ಈ ಸರ್ಕಾರದಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರು ವಿರುದ್ದ ಸ್ವಾಮೀಜಿ ಗರಂ ಆದರು.

ನನಗಂತೂ ಬಹಳ ನೋವಾಗಿದೆ, ಗುರುಗಳಾದಂತವರು ಮಠ ಬಿಟ್ಟು ಅವರ ಮನೆಬಾಗಿಲಿಗೆ ಹೋಗಿದ್ದೆ. ಪತ್ರ ಚಳವಳಿ ಮೂಲಕ ಎಲ್ಲಾ ಶಾಸಕರ ಮನೆಬಾಗಿಲಿಗೆ ಹೋಗಿ ಮನವಿ ಸಲ್ಲಿಸಿದ್ದೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವಂತೆ ಶಾಸಕರು ಪತ್ರ ಬರೆದರು. ಆದರೆ ಸ್ಪೀಕರ್ ಹತ್ತಿರ ಹೋಗಿ ಇದನ್ನು ಅಜೆಂಡಾಗೆ ಸೇರಿಸಿ ಎನ್ನುವ ಪ್ರಯತ್ನ ಯಾರೂ ಮಾಡಲಿಲ್ಲ. ಅವಕಾಶ ಕೊಡದಿದ್ದರೆ ನೀವು ಪ್ರತಿಭಟಿಸಬೇಕಿತ್ತು, ಸಭೆ ತ್ಯಾಗ ಮಾಡಬೇಕಾಗಿತ್ತು. ಸಿಎಂ ಮನೆಗೆ ಹೋಗಿ ಒತ್ತಡವನ್ನು ತರಬೇಕಾಗಿತ್ತು, ಅದನ್ನೂ ಮಾಡಿಲ್ಲ. ಇಡೀ ರಾಜ್ಯದಲ್ಲಿರುವ ಸಮುದಾಯದ ಜನರಿಗೆ ಅಸಮಾಧಾನ ಕಾಡುತ್ತಿದೆ ಎಂದರು.

ಕೆಲವು ಶಾಸಕರು ಪ್ರಯತ್ನ ಮಾಡಿರಬಹುದು. ಆದರೆ ಉಳಿದ ಶಾಸಕರು ಅವಕಾಶ ಸಿಗದಿದ್ದಾಗ ಸಭಾತ್ಯಾಗ ಮಾಡಿ ಸಿಎಂ ಮನೆಗೆ ಹೋಗಬೇಕಿತ್ತು. ನೀವು ಪ್ರಶ್ನೆ ಮಾಡಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ. ಸರ್ಕಾರ ಬಂದು ಒಂದೂವರೆ ವರ್ಷ ಆದರೂ ಒಂದು ಸಭೆ ಮಾಡಲಾಗುತ್ತಿಲ್ಲ. ಸಮಾಜದ ಬಗ್ಗೆ ಕಳಕಳಿ ಇದ್ದರೆ ಸಿಎಂ ಮನೆಗೆ ಹೋಗಿ ಚರ್ಚಿಸಿ ಎಂದು ಸ್ವಾಮೀಜಿ ಕಿಡಿಕಾರಿದರು.


Spread the love

About Laxminews 24x7

Check Also

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು

Spread the loveಸನ್ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ