Breaking News

ರಾಜ್ಯದಲ್ಲಿ ಮತ್ತೆ ಲಾಕ್​ಡೌನ್​ ಜಾರಿಯಾಗುತ್ತೇ?; ಕಲಬುರ್ಗಿಯಲ್ಲಿ ಸ್ಪಷ್ಟನೆ ನೀಡಿದ ಸಚಿವ ಕೆ. ಸುಧಾಕರ್​

Spread the love

ಕಲಬುರ್ಗಿ (ಜೂ.14):  ಜಿಲ್ಲೆಗೆ ಭೇಟಿ ನೀಡಿರುವ ವೈದ್ಯಕೀಯ ಸಚಿವ ಕೆ.ಸುಧಾಕರ್ ಟೆಂಪಲ್ ರನ್ ನಡೆಸಿದರು. ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ  ಸುಧಾಕರ್ ಭೇಟಿ ನೀಡಿದರು. ರಾಜ್ಯ ಪ್ರವಾಸದಲ್ಲಿರುವ ಸುಧಾಕರ್ ಇಂದು ಬೆಳಿಗ್ಗೆಯೇ ದತ್ತಾತ್ರೇಯನ ಪಾದುಕೆ ದರ್ಶನ ಪಡೆದುಕೊಂಡಿದ್ದಾರೆ. ದತ್ತನ ಸನ್ನಿಧಿಯಲ್ಲಿ ಸಚಿವರಿಂದ ವಿಶೇಷ ಪೂಜೆ ನೆರವೇರಿಸಿ ವಿಶ್ವದಿಂದ ಕೊರೊನ ಹೆಮ್ಮಾರಿ ದೂರ ಆಗಲಿ, ಜನ ಈ ಸಂಕಷ್ಟದಿಂದ ದೂರ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

ಈ ವೇಳೆ ಮಾತನಾಡಿದ ಸಚಿವರು, “ನನಗೆ ದತ್ತಾತ್ರೇಯನ ಮೇಲೆ ವಿಶೇಷ ನಂಬಿಕೆಯಿದೆ. ಹೀಗಾಗಿಯೇ ಇಂದು ದರ್ಶನ ಪಡೆದಿದ್ದೇನೆ. ವಿಶ್ವವನ್ನು ಕಾಡುತ್ತಿರುವ ಮಹಾಮಾರಿಯಿಂದ ಮುಕ್ತಿ ಸಿಗುವಂತೆ ಪ್ರಾರ್ಥಿಸಿದ್ದೇನೆ,” ಎಂದರು.

ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೂಡ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಮತ್ತಿತರರು ಮತ್ತಿತರರು ಭಾಗಿಯಾಗಿದ್ದರು. ಕಲಬುರ್ಗಿಗೆ ಆಗಮಿಸಿ ಕೋರಂಟಿ ಹನುಮಾನ ಮಂದಿರಕ್ಕೂ ಅವರು ಭೇಟಿ ನೀಡಿ ದರ್ಶನ ಪಡೆದರು. ಆದರೆ ಜೂನ್ 22ರವರೆಗೂ ದತ್ತಾತ್ರೇಯ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಇದರ ನಡುವೆಯೇ ಸಚಿವರು ದರ್ಶನ ಮಾಡಿಕೊಂಡು ಬಂದಿರೋದು ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಪ್ರಶ್ನೆಯೇ ಇಲ್ಲ. ಮತ್ತೆ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂಬ ಸುದ್ದಿ ಊಹಾಪೋಹ ಎಂದು ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ನಿರ್ಧರಿಸಿದ್ದಾರೆ. ಐದನೆಯ ಬಾರಿಗೆ ಪ್ರಧಾನಿಗಳು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕೊರೋನಾ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯುವವರಿದ್ದಾರೆ. ಪ್ರಧಾನಿ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ಇರೋದರ ಕಾರಣದಿಂದಾಗಿ ಇದೇ ಕಾರಣಕ್ಕೆ ಮತ್ತೆ ಲಾಕ್ ಡೌನ್ ಅನ್ನೋ ಊಹಾಪೋಹ ಎದ್ದಿದೆ. ಆದರೆ ಯಾವುದೇ ಕಾರಣಕ್ಕೂ ಮತ್ತೆ ಲಾಕ್ ಡೌನ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ವರದಿ ಬರುವ ಮುನ್ನವೇ ಶಂಕಿತರನ್ನು ಮನೆಗೆ ಕಳುಹಿಸುತ್ತಿರುವ ಕ್ರಮಕ್ಕೆ ಸಚಿವ ಸುಧಾಕರ್ ಸಮರ್ಥನೆ ಮಾಡಿಕೊಂಡರು. ರೋಗ ಲಕ್ಷಣ ಇಲ್ಲದಿದ್ದರೆ ಅವರಿಂದ ಹರಡುವ ಸಾಧ್ಯತೆ ಕಡಿಮೆಯಿದೆ. ಇದನ್ನು ಡಬ್ಲ್ಯು.ಎಚ್.ಒ. ಸಹ ಸ್ಪಷ್ಟಪಡಿಸಿದೆ. ಇದು ನಮ್ಮ ಅನುಭವಕ್ಕೂ ಬಂದಿದೆ. ಹೀಗಾಗಿಯೇ ವರದಿ ಬರುವ ಮುಂಚೆಯೇ ಬಿಡುಗಡೆ ಮಾಡಲಾಗುತ್ತಿದೆ ಎಂದರು.


Spread the love

About Laxminews 24x7

Check Also

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ. ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Spread the love ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ