ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಸಾಲ ಮತ್ತಷ್ಟು ದುಬಾರಿಯಾಗಿದೆ. ಎಸ್‌ಬಿಐ ತನ್ನ ಬಹುತೇಕ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.10 ರಷ್ಟು ಏರಿಕೆ ಮಾಡಿದೆ.
ಇದರೊಂದಿಗೆ ಎಂಸಿಎಲ್‌ಆರ್ ಆಧರಿತ ಎಲ್ಲಾ ಸಾಲಗಳು ದುಬಾರಿಯಾಗಲಿವೆ. ಇಎಂಐ ಹೆಚ್ಚಳ ಅಥವಾ ಸಾಲದ ಕಂತು ವಿಸ್ತರಣೆ ಮೂಲಕ ಸಾಲಗಾರರಿಗೆ ಹೊರೆ ಹೆಚ್ಚಾಗಲಿದೆ.
ಆಗಸ್ಟ್ 15 ರಿಂದಲೇ ಅನ್ವಯವಾಗುವಂತೆ ಎಸ್.ಬಿ.ಐ. ಹೊಸ ಬಡ್ಡಿದರ ಪರಿಷ್ಕರಣೆ ಮಾಡಿದ್ದು, ಮನೆ, ವಾಹನ, ಗೃಹ ಇತರೆ ಸಾಲಗಳ ಬಡ್ಡಿದರ ಶೇಕಡ 0.10 ರಷ್ಟು ಹೆಚ್ಚಾಗಲಿದೆ.
Laxmi News 24×7