Breaking News

ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ₹35 ಲಕ್ಷ ವಂಚನೆ

Spread the love

ಶಿರಸಿ: ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ, ಮಂಗಳೂರು ಮೂಲದ ವ್ಯಕ್ತಿಯೊಬ್ಬನಿಗೆ ಶಿರಸಿ ಮೂಲದ ಮೂವರು ₹35 ಲಕ್ಷ ವಂಚನೆ ಮಾಡಿದ ಕುರಿತು ಶನಿವಾರ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹುಲೇಕಲ್ ಸಮೀಪದ ಹೆಂಚರಟಾದ ಅಬ್ದುಲ್ ಮತಿನ‌್ ಅಬ್ದುಲ್ ಗಫಾರ ಸಾಬ್, ಅಬ್ದುಲ್ ರೆಹಮಾನ್‌ ಅಬ್ದುಲ್ ಗಫಾರ್‌ ಸಾಬ್ ಹಾಗೂ ನಾಝೀಯಾ ಅಬ್ದುಲ್ ಮತೀನ್ ಆರೋಪಿಗಳಾಗಿದ್ದಾರೆ.

ಈ ಮೂವರು ಮಂಗಳೂರು ಹಂಪನಕಟ್ಟಾ ಲೈಟ್ ಹೌಸ್ ಹಿಲ್ ರಸ್ತೆಯ ಬಿ.ಐ.ಮೊಹಮ್ಮದ್‌ ರಫೀಕ್ ಎಂಬಾತನಿಗೆ ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ ₹35 ಲಕ್ಷ ಪಡೆದು, ಅಂಗಡಿ ಕೊಡಿಸದೇ, ಪಡೆದ ಹಣವನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರ

Spread the love ಬೆಂಗಳೂರು: ಮೈಕ್ರೋ ಫೈನಾನ್ಸಿಯರ್​ಗಳ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಜನರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ