ಬೆಳಗಾವಿ ಹಿಂಡಲಗಾ ಜೈಲಿನ ಮೇಲೆ ನಗರ ಪೊಲೀಸರ ದಿಢೀರ್ ದಾಳಿ
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನೇತೃತ್ವದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿದಂತೆ 260ಕ್ಕೂ ಅಧಿಕ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ದಾಳಿಯ ವೇಳೆ ತಂಬಾಕು ಪಾಕೇಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹಿಟರ್ ವೈಯರ್ ಬಂಡಲ್, ಮತ್ತು ಎಲೆಕ್ಟ್ರಿಕಲ್ ಒಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ದಾಳಿಯು ಜೈಲಿನ ಒಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ನಡೆದಿದೆ ಎಂದು ತಿಳಿದುಬಂದಿದೆ.
Laxmi News 24×7