Breaking News

9 ಮಹಿಳೆಯರನ್ನು ಕೊಂದಿದ್ದ ಸರಣಿ ಹಂತಕನ ಬಂಧನ,

Spread the love

9 ಮಹಿಳೆಯರನ್ನು ಕೊಂದಿದ್ದ ಸರಣಿ ಹಂತಕನ ಬಂಧನ,

ಅಂತೂ ಉತ್ತರ ಪ್ರದೇಶ ಪೊಲೀಸರು 9 ಮಹಿಳೆಯರನ್ನು ಕೊಲೆ ಮಾಡಿದ್ದ ಸರಣಿ ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಹುಡುಕಾಟಕ್ಕೆ 22 ಪೊಲೀಸ್ ತಂಡಗಳಿದ್ದವು, 1.5 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲಾಗಿತ್ತು. 24 ಗಂಟೆಯೂ ಪೊಲೀಸರು ಈ ವಿಚಾರದ ಮೇಲೆ ನಿದ್ದೆಗೆಟ್ಟು ಕೆಲಸ ಮಾಡಿದ್ದರು, ಕೆಲ ಬರೇಲಿ ಜಿಲ್ಲೆಯಲ್ಲಿ 9 ಮಹಿಳೆಯರನ್ನು ಕತ್ತು ಹಿಸುಕಲು ಸೀರೆಗಳನ್ನು ಬಳಸುತ್ತಿದ್ದನು

9 ಮಹಿಳೆಯರನ್ನು ಕೊಂದಿದ್ದ ಸರಣಿ ಹಂತಕನ ಬಂಧನ, ಈ ಕ್ರೂರ ಮನಸ್ಥಿತಿಗೆ ಕಾರಣವಿದು

ಸೀರೆಯ ಗಂಟನ್ನು ಕಟ್ಟುವ ಶೈಲಿ, ಕೊಲೆಗಳ ವಿಶಿಷ್ಟ ಮಾದರಿ ಎಲ್ಲವೂ ಕೊಲೆ ರಹಸ್ಯವನ್ನು ಭೇದಿಸಲು ಸಹಾಯ ಮಾಡಿದೆ. ಜೂನ್ 2023 ಮತ್ತು ಜುಲೈ 2024 ರ ನಡುವೆ ಬರೇಲಿ ಶಾಹಿ ಮತ್ತು ಶಿಶ್‌ಗಢ ಪೊಲೀಸ್ ಆಸು ಪಾಸಿನಲ್ಲಿ ನಡೆದ 9 ಮಹಿಳೆಯರ ಕೊಲೆಗೆ ಸಂಬಂಧಿಸಿದಂತೆ ಹಂತಕನನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು 38 ವರ್ಷದ ಕುಲದೀಪ್ ಕುಮಾರ್ ಗಂಗ್ವಾರ್ ಎಂದು ಪೊಲೀಸರು ಗುರುತಿಸಿದ್ದು, ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ಆಗಸ್ಟ್ 8 ರಂದು ಬಂಧಿಸಲಾಯಿತು. ಆತ ಮಹಿಳೆಯರನ್ನು ಕೊಲೆ ಮಾಡಿ, ಮಹಿಳೆಯರ ಲಿಪ್​ಸ್ಟಿಕ್​ ಹಾಗೂ ಬಿಂದಿಗಳನ್ನು ಆತ ಇಟ್ಟುಕೊಳ್ಳುತ್ತಿದ್ದ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ