ಹಾವೇರಿ, ಆ.10: ಮಹಿಳೆಯರು ಕಾತರದಿಂದ ಕಾಯುತ್ತಿದ್ದ ಗೃಹಲಕ್ಷ್ಮೀ ಯೋಜನೆಯ(Gruha Lakshmi Scheme) 9 ನೇ ಕಂತು ಬಿಡುಗಡೆಯಾಗಿದ್ದು, ಅದೇ ಹಣದಿಂದ ಗೃಹಿಣಿಯೊಬ್ಬರು ಮನೆಗೆ ವಾಷಿಂಗ್ ಮಷಿನ್ ಖರೀದಿಸಿದ್ದಾರೆ.
, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಬೀಡಂ ಗ್ರಾಮದ ನಿವಾಸಿ ಚಂಪವಾತಿ ಕರೆವ್ವನವರ್ ಎಂಬ ಮಹಿಳೆ, ಗೃಹಲಕ್ಷ್ಮೀ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿ ಪೂಜೆ ಸಲ್ಲಿಸಿದ್ದಾರೆ. ಇದೇ ಖುಷಿಯಲ್ಲಿ ಮಾತನಾಡಿದ ಅವರು, ‘ಒತ್ತಡದಿಂದ ಕೆಲಸ ಮಾಡುತ್ತಿದ್ದೆ. ಇದೀಗ ವಾಷಿಂಗ್ ಮಷಿನ್ ಖರೀದಿಯಿಂದ ಕೆಲಸದ ಹೊರೆ ಕಡಿಮೆಯಾಗಿದೆ. ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ್ದಾರೆ.
Laxmi News 24×7