ಬೆಳಗಾವಿ, ಆಗಸ್ಟ್ 09: ಕಾರ್ಖಾನೆಯಲ್ಲಿ ಅಗ್ನಿ ದುರಂತದಲ್ಲಿ (Fire Tragedy) ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಕುಟುಂಬಕ್ಕೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಒಟ್ಟು 18 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಸಜೀವದಹನವಾಗಿದ್ದ.
ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ.
ಮುಂಚೆ 10 ಲಕ್ಷ ರೂ. ಪರಿಹಾರ ಬೇಡ ಅಂತಾ ಮೃತನ ತಂದೆ ಸಣ್ಣಯಲ್ಲಪ್ಪ ಅಳಲು ತೋಡಿಕೊಂಡಿದ್ದರು.
ಬಳಿಕ 18 ಲಕ್ಷ ರೂ. ಪರಿಹಾರದ ಚೆಕ್ವನ್ನು ತಂದೆ ಸಣ್ಣಯಲ್ಲಪ್ಪ, ತಾಯಿ ಬಸವ್ವ ಹೆಸರಿನಲ್ಲಿ ಪರಿಹಾರದ ಚೆಕ್ ಅನ್ನು ಸ್ನೇಹಂ ಟೇಪಿಂಗ್ ಕಾರ್ಖಾನೆ ವಿತರಣೆ ಮಾಡಿದೆ.