ತುಮರಿ: ತಾಲ್ಲೂಕು ಕೇಂದ್ರದಿಂದ 55 ಕಿ.ಮೀ ದೂರದ ಕರೂರು ಹೋಬಳಿಯ ಹಲವು ಗ್ರಾಮಗಳು ಇಂದಿಗೂ ಬಸ್ ಸೌಲಭ್ಯವನ್ನೇ ಕಂಡಿಲ್ಲ. ಇಲ್ಲಿನ ಜನರು ಸಮೀಪದ ತುಮರಿ, ಕರೂರು, ನಿಟ್ಟೂರು, ಇಲ್ಲವೇ ಹೊಳೆಬಾಗಿಲಿಗೆ ಬಂದು ಬಸ್ ಹತ್ತಿ ಕೆಲಸ, ಕಾರ್ಯಗಳಿಗೆ ತೆರಳಬೇಕಿದೆ.
ಕೆಲ ಗ್ರಾಮಗಳು ದಶಕಗಳಿಂದ ಬಸ್ ಸೌಲಭ್ಯ ಕಂಡಿಲ್ಲ.
ಇನ್ನು ಕೆಲ ಗ್ರಾಮಗಳಲ್ಲಿ ಮೊದಲಿದ್ದ ಖಾಸಗಿ ಬಸ್‌ಗಳು ಕೋವಿಡ್, ಶಕ್ತಿ ಯೋಜನೆಯ ಪರಿಣಾಮ ಸೇವೆ ಸ್ಥಗಿತಗೊಳಿಸಿವೆ.
ಸಿಗ್ಗಲು, ಕಳೋಡಿ, ಬೊಬ್ಬಿಗೆ, ಹೆರಾಟೆ ಗ್ರಾಮಗಳು ಇದುವರೆಗೂ ಬಸ್ ಸೌಲಭ್ಯವನ್ನೇ ಕಂಡಿಲ್ಲ. ಬರುವೆ, ಮಾರಲಗೋಡು, ಮಣಕಂದೂರು, ಕಳೂರು ಭಾಗಕ್ಕೆ ಕೆಲ ವರ್ಷಗಳ ಹಿಂದೆ ಖಾಸಗಿ ಬಸ್ ಸೌಲಭ್ಯ ಈಗ ಸ್ಥಗಿತಗೊಂಡಿದೆ.
ಇಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೇರೆ ಗ್ರಾಮಕ್ಕೆ ಹೋಗಿ ಬಸ್ ಸೌಲಭ್ಯ ಪಡೆಯಬೇಕಿದೆ.