Breaking News

ಸಾಕು ನಾಯಿಯೊಂದು ರಕ್ತದಾನ ಮಾಡಿ ಇನ್ನೊಂದು ನಾಯಿಯ ಪ್ರಾಣ ಉಳಿಸಿದೆ.

Spread the love

ಕೊಪ್ಪಳ, ಆಗಸ್ಟ್ 1: ರಕ್ತದಾನ ಶ್ರೇಷ್ಠ ದಾನ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಅನೇಕರು ಮೃತಪಡುತ್ತಿರುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ನಿಜ.ಕೊಪ್ಪಳ: ಇನ್ನೊಂದು ನಾಯಿಯ ಪ್ರಾಣ ಉಳಿಸಲು ರಕ್ತದಾನ ಮಾಡಿದ ಶ್ವಾನ

ಕೊಪ್ಪಳದಲ್ಲಿ ಬುಧವಾರ ಸಾಕಿದ ನಾಯಿಯೊಂದು ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ನಗರದ ಪಶು ಚಿಕಿತ್ಸಾಲಯದಲ್ಲಿ, ಪ್ರಾಧ್ಯಾಪಕ ಬಸವರಾಜ ಪೂಜಾರ್​​ರವರ ಸಾಕು ನಾಯಿ ಮೂರು ವಷ೯ದ ಭೈರವನಿಂದ (ಡಾಬರ್ ಮ್ಯಾನ್) ರಕ್ತದಾನ ಮಾಡಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ, ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ್ದೇ ಆದ 9 ವರ್ಷದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕವಾಗಿತ್ತು. ಇದನ್ನು ಅರಿತ ವೈದ್ಯರು ನಗರದ ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪಕಿ೯ಸಿ ಕರೆಸಿ ಅವುಗಳ ರಕ್ತದ ಸ್ಯಾಂಪಲ್​​ಗಳನ್ನು ಪರೀಕ್ಷೆಗೆ ಒಳಪಡಿಸಿದರು.


Spread the love

About Laxminews 24x7

Check Also

ಬರಗೂರು ರಾಮಚಂದ್ರಪ್ಪನವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ; ಎಸ್.ಐ. ಬಿರಾದಾರ

Spread the love ಬರಗೂರು ರಾಮಚಂದ್ರಪ್ಪನವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ; ಎಸ್.ಐ. ಬಿರಾದಾರ ಬಸವರಾಜ ಕಟ್ಟಿಮನಿ ಕಾದಂಬರಿ ಪ್ರಶಸ್ತಿ ಪ್ರದಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ