Breaking News

ಬೆಳಗಾವಿ-ಮೀರಜ್ ನಡುವೆ ಪ್ರಯಾಣಿರ ಅನುಕೂಲಕ್ಕಾಗಿ ವಿಶೇಷ ಪ್ಯಾಸೆಂಜರ್ ರೈಲು ಓಡಾಟ

Spread the love

ಬೆಳಗಾವಿ, ಆಗಸ್ಟ್.01: ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಆಗುತ್ತಿದ್ದು, ಸಪ್ತ ನದಿಗಳು ಹರಿಯುವ ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರವಾಹ ಎದುರಾಗಿದೆ.

ಗ್ರಾಮಗಳು, ಸಾವಿರಾರು ಎಕರೆ ಜಮೀನು, ಸೇತುವೆಗಳು ಮುಳುಗಿ ಜನರ ಬದುಕು ಬೀದಿಗೆ ಬಂದಿದೆ. ಇನ್ನು ಕೃಷ್ಣಾ ನದಿಯಿಂದ 3 ಲಕ್ಷ ಕ್ಯೂಸೆಕ್ ನೀರು ಮತ್ತು ಘಟಪ್ರಭಾದಿಂದ 73 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಹರಿಬಿಡುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಕೃಷ್ಣಾ ಹಾಗೂ ಘಟಪ್ರಭಾ ನದಿಯ ವ್ಯಾಪ್ತಿಯಲ್ಲಿ 44ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡು ರಸ್ತೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ಪ್ರಯಾಣಿರ ಅನುಕೂಲಕ್ಕಾಗಿ ವಿಶೇಷ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದೆ

ಪ್ಯಾಸೆಂಜರ್ ವಿಶೇಷ ರೈಲು ವೇಳಾಪಟ್ಟಿ

  • ಬೆಳಗಾವಿ-ಮೀರಜ್ ರೈಲು ಆ-01 (07301) ಮುಂಜಾನೆ 6 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಮು. 9ಕ್ಕೆ ಮೀರಜ್ ನಿಲ್ದಾಣ ತಲುಪಲಿದೆ.
  • ಮೀರಜ್-ಬೆಳಗಾವಿ ರೈಲು ಸಂಖ್ಯೆ (07302) ಮುಂಜಾನೆ 9.50ಕ್ಕೆ ಮೀರಜ್​ನಿಂದ ಹೊರಟು ಮಧ್ಯಾಹ್ನ 12.50 ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ.
  • ಬೆಳಗಾವಿ-ಮೀರಜ್ ರೈಲು ಆ.01ರ ಮಧ್ಯಾಹ್ನ 01.30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಸಂಜೆ 04.30ಕ್ಕೆ ಮೀರಜ್ ತಲುಪಲಿದೆ.
  • ಮೀರಜ್-ಬೆಳಗಾವಿ ರೈಲು ಆ.01 ಸಂಜೆ 05.35 ಕ್ಕೆ ಮೀರಜ್​ನಿಂದ ಹೊರಟು ರಾತ್ರಿ 08.35 ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ.ಆಗಸ್ಟ್ 01ರಿಂದ ಆಗಸ್ಟ್ 04ರ ವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ 2 ಬಾರಿ ಓಡಾಟ ನಡೆಸಲಿದೆ.

Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ