Breaking News

ಬೆಳಗಾವಿ | ಮನೆಗಳು ಜಲಾವೃತ: ಕಾಳಜಿ ಕೇಂದಲ್ಲಿ ಆಶ್ರಯ

Spread the love

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಶನಿವಾರ ಮಳೆ ಅಬ್ಬರ ತುಸು ತಗ್ಗಿದೆ. ಅಣೆಕಟ್ಟೆಗಳಿಂದ ನಿರಂತರ ನೀರು ಹರಿಸುತ್ತಿರುವ ಕಾರಣ, ಜಿಲ್ಲೆಯ 41 ಸೇತುವೆಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಅಂದಾಜು 700ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಬೆಳಗಾವಿ | ಮನೆಗಳು ಜಲಾವೃತ: ಕಾಳಜಿ ಕೇಂದಲ್ಲಿ ಆಶ್ರಯ

ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಮೇಲೆ ಅಪಾರ ಪ್ರಮಾಣ ನೀರು ಹರಿಯಿತು. ಇದರಿಂದ ಕೆಲ ಸಮಯ ಸಂಚಾರ ಬಂದ್ ಆಯಿತು. ಹೆದ್ದಾರಿ ಮೇಲೆಯೇ ಮಣ್ಣು-ಕಲ್ಲು ಸುರಿದು ಅದರ ಮೇಲೆ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲಾಯಿತು.

ಹಿಡಕಲ್ ಜಲಾಶಯದಿಂದ 44 ಸಾವಿರ ಕ್ಯುಸೆಕ್‌, ಹಿರಣ್ಣಕೇಶಿ ನದಿಯಿಂದ 24 ಸಾವಿರ ಕ್ಯುಸೆಕ್‌, ಶಿರೂರು ಜಲಾಶಯದಿಂದ 8,000 ಕ್ಯುಸೆಕ್‌, ಬಳ್ಳಾರಿ ನಾಲಾದಿಂದ 3,000 ಕ್ಯುಸೆಕ್‌ ಸೇರಿ ಒಟ್ಟು 79 ಸಾವಿರ ಕ್ಯುಸೆಕ್‌ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದೆ. ಇದರಿಂದ ಗೋಕಾಕ ನಗರದ 150 ಮನೆಗಳು ಹಾಗೂ 150 ಮಳಿಗೆಗಳು ನೀರಿನಿಂದ ಆವೃತವಾಗಿವೆ.


Spread the love

About Laxminews 24x7

Check Also

ಸರ್ಕಾರಿ ವೈದ್ಯರು, ನರ್ಸ್​ಗಳಿಗೆ ಗ್ರಾಮೀಣ ಸೇವೆ ಕಡ್ಡಾಯ

Spread the loveಬೆಂಗಳೂರು: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್​ಗಳು ಸೇರಿದಂತೆ ಇತರ ಸಿಬ್ಬಂದಿ ಇನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ