ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
ಲಾರಿ ಚಾಲಕ ಅರ್ಜುನ ಸೇರಿದಂತೆ ನಾಪತ್ತೆಯಾದವರ ಪತ್ತೆಗೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ ಕಾರವಾರ/ಅಂಕೋಲಾ: ಜುಲೈ 16 ರಂದು ಉತ್ತರಕನ್ನಡದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಲಾರಿ ಸಮೇತ ಚಾಲಕ ಅರ್ಜುನ್ ಸೇರಿದಂತೆ ಮೂವರು ನಾಪತ್ತೆಯಾಗಿ ಇಂದಿಗೆ ಹನ್ನೊಂದು ದಿನಗಳು ಕಳೆದಿದ್ದು ಇನ್ನೂ ಹುಡುಕಾಟ ಮುಂದುವರೆದಿದೆ, ಅದರಂತೆ ಇಂದು ಮಲ್ಪೆ ಈಶ್ವರ್ ತಂಡ ಶಿರೂರಿಗೆ ಬಂದಿದ್ದು ನಾಪತ್ತೆಯಾದ ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನಲಾಗಿದೆ.
ಈಶ್ವರ್ ಮಲ್ಪೆ, ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆ ಕಾರ್ಯಾಚರಣೆ ನಡೆಸುವಂತೆ ಉತ್ತರಕನ್ನಡ ಎಸ್ಪಿ, ಡಿಎಸ್ಪಿ ಅವರು ಶುಕ್ರವಾರ ಕರೆ ಮಾಡಿದ್ದರು ಈ ನಿಟ್ಟಿನಲ್ಲಿ ಶನಿವಾರ ಮುಂಜಾನೆ ನಮ್ಮ ತಂಡ ಶಿರೂರಿಗೆ ಬಂದು ಕಾರ್ಯಾಚರಣೆ ಆರಂಭಿಸಿದ್ದೇವೆ ಆದರೆ ಗಂಗಾವಳಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ನೀರಿನಾಳಕ್ಕೆ ಹೋಗಿ ಹುಡುಕಾಟ ನಡೆಸುವುದು ಸವಾಲಿನ ಕೆಲಸ ಅಲ್ಲದೆ ಭೂ ಕುಸಿತದ ಸಂದರ್ಭ ಮನೆಯ ಅವಶೇಷಗಳು ನದಿಗೆ ಬಿದ್ದಿರುವುದರಿಂದ
ನೀರಿನಾಳದಲ್ಲಿ ಕಬ್ಬಿಣದ ಶೀಟ್ ಗಳು ಜೊತೆಗೆ ಕೆಸರು ಮಿಶ್ರಿತ ನೀರು ಹರಿಯುದರಿಂದ ನೀರಿನಾಳದಲ್ಲಿರುವ ವಸ್ತುಗಳು ಕಣ್ಣಿಗೆ ಗೋಚರವಾಗುವುದಿಲ್ಲ ಬರಿ ಸ್ಪರ್ಶ ಜ್ಞಾನದಿಂದ ಯಾವ ವಸ್ತು ಎಂದು ಕಂಡುಹಿಡಿಯಬೇಕು ಹಾಗಾಗಿ ತುಂಬಾ ಸವಾಲಿನ ಕೆಲಸ ಎಂದು ಹೇಳಿದ್ದಾರೆ.