Breaking News

ಮೂಡಲಗಿ: ನದಿ ನೀರಿನಲ್ಲಿ ಕಬ್ಬಿನ ಬೆಳೆ

Spread the love

ಮೂಡಲಗಿ: ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ ಬುಧವಾರ ಮಧ್ಯಾಹ್ನ ನೀರು ಬಿಟ್ಟಿದ್ದರಿಂದ ಗುರುವಾರ ಬೆಳಿಗ್ಗೆಯಿಂದ ತಾಲ್ಲೂಕಿನ ಮಸಗುಪ್ಪಿ, ಸುಣಧೋಳಿ, ಕಮಲದಿನ್ನಿ, ಅವರಾಧಿ, ಢವಳೇಶ್ವರ ಗ್ರಾಮಗಳ ಬಳಿಯಲ್ಲಿ ನದಿ ನೀರಿನ ಹರಿವು ವಿಸ್ತಾರಗೊಂಡು ಸಾವಿರಾರು ಎಕರೆಯಷ್ಟು ಕಬ್ಬಿನ ಬೆಳೆ ನೀರಿನಲ್ಲಿ ನಿಂತಿದೆ.

ಮೂಡಲಗಿ: ನದಿ ನೀರಿನಲ್ಲಿ ಕಬ್ಬಿನ ಬೆಳೆ

ಪ್ರವಾಹ ಭೀತಿ ಇರುವ ತೋಟಪಟ್ಟಿಗಳಲ್ಲಿ ವಾಸವಾಗಿರುವ ಜನರು ಜಾನುವಾರು ಸಹಿತಿ ಸುರಕ್ಷಿತ ಸ್ಥಳಕ್ಕೆ ಬೆಳಿಗ್ಗೆಯಿಂದ ತೆರಳುತ್ತಿದ್ದಾರೆ. ಪ್ರವಾಹ ಸಮಸ್ಯೆ ನಿರ್ವಹಣೆಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ಮಹಾದೇವ ಸನ್ನಮುರೆ ‘ತಿಳಿಸಿದರು.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ