ಮುಂಬೈ: ದರೋಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದರೋಡೆಕೋರನೊಬ್ಬ ಜೈಲಿನಿಂದ ಬಿಡುಗಡೆಗೊಂಡ ಕೆಲವೇ ದಿನದಲ್ಲಿ ಮತ್ತೆ ಜೈಲು ಪಾಲಾಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಹಾಗೆ ಈ ದರೋಡೆಕೋರನನ್ನು ಸುಖಾಸುಮ್ಮನೆ ಜೈಲಿಗೆ ಹಾಕಿಲ್ಲ ಇದರ ಹಿಂದೆ ಒಂದು ಕತೆ ಇದೆ.
ಮಹಾರಾಷ್ಟ್ರದ ನಾಸಿಕ್ ಮೂಲದ ದರೋಡೆಕೋರನಾಗಿರುವ ಹರ್ಷದ್ ಪಾಟಂಕರ್ ದರೋಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಇದೆ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಇತ್ತ ಜೈಲಿನಿಂದ ಬಿಡುಗಡೆಗೊಳ್ಳುತ್ತಿರುವ ವಿಚಾರ ಆತನ ಬೆಂಬಲಿಗರಿಗೆ ಗೊತ್ತಾಗುತ್ತಿದ್ದಂತೆ ದರೋಡೆಕೋರನನ್ನು ಮೆರವಣಿಗೆ ಮೂಲಕ ಮನೆಗೆ ಕರೆದೊಯ್ಯುವ ಆಲೋಚನೆ ಮಾಡಿದ್ದರು ಅದರಂತೆ ಜುಲೈ 23 ರಂದು ಜೈಲಿನಿಂದ ಹರ್ಷದ್ ಹೊರಬಂದಿದ್ದಾನೆ ಈ ವೇಳೆ ಆತನ ಸಹಚರರು ಬೈಕ್ ಹಾಗೂ ಕಾರಿನ ಮೂಲಕ ಮೆರವಣಿಗೆ ನಡೆಸಿದ್ದಾರೆ
ಅಲ್ಲದೆ ಮೆರವಣಿಗೆ ವೇಳೆ ಸಾರ್ವಜನಿಕರಿಗೂ ತೊಂದರೆಯಾಗಿದೆ ಜೊತೆಗೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹರ್ಷದ್ ವಿರುದ್ಧ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪ, ಜೊತೆಗೆ ಅನುಮತಿ ಪಡೆಯದೆ ರ್‍ಯಾಲಿ ನಡೆಸಿರುವುದು ಸೇರಿದಂತೆ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಹರ್ಷದ್ ಪಾಟಂಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತೆ ಬಂಧಿಸಿದ್ದಾರೆ.