ಚಿಕ್ಕೋಡಿ: ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರ, ಕೊಯ್ನಾ, ನವಜಾ ಮತ್ತು ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಹಾಗೂ ರಾಜ್ಯದ ಗಡಿ ಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ಭಾಗದಲ್ಲಿಯೂ ನಿರಂತರವಾಗಿ ಮಳೆ ಆಗುತ್ತಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ 1.05 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ದೂಧಗಂಗಾ ಮತ್ತು ವೇದಗಂಗಾ ನದಿಗಳು ಒಡಲು ದಾಟಿ ಹರಿದು ಪಕ್ಕದ ಬೆಳೆಗಳಿಗೆ ನುಗ್ಗಿವೆ.
ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಳೇಶ್ವರ, ಕೊಯ್ನಾ, ನವಜಾ ಹಾಗೂ ಕಾಳಮ್ಮವಾಡಿ ಭಾಗದಲ್ಲಿ ಎರಡು ದಿನಗಳಿಂದ 150 ಮಿಮೀ ಗೂ ಅಧಿಕ ಮಳೆ ಸುರಿಯುತ್ತಿದೆ. ಇದರಿಂದ ಕೃಷ್ಣಾ ನದಿಗೆ ಒಂದೇ ರಾತ್ರಿಯಲ್ಲಿ 21 ಸಾವಿರ ಕ್ಯೂಸೆಕ್ ಮತ್ತು ದೂಧಗಂಗಾ ಮತ್ತು ವೇದಗಂಗಾ ನದಿಗೆ 5 ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿದೆ.
Laxmi News 24×7