ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪ ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಭಾನುವಾರ ಕೃಷ್ಣಾ ನದಿ ತೀರದ ಗ್ರಾಮಗಳಾದ ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಮಾಂಜರಿ, ಯಡೂರ, ಚಂದೂರ, ಕಲ್ಲೋಳಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.

ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದರೆ ಮುಂಜಾಗ್ರತಾ ಕ್ರಮವಾಗಿ ಈ ಭಾಗದಲ್ಲಿ ಐದು ಸುಸಜ್ಜಿತ ಯಾಂತ್ರಿಕ ದೋಣಿಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಹದ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಕಾಶ ಹುಕ್ಕೇರಿ ಅವರು, ಈ ಐದೂ ಗ್ರಾಮಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂಗಳಿ ಗ್ರಾಮದ ಗಣಪತಿ ಧನವಾಡೆ, ರಮೇಶ ಮುರ್ಚೆಟ್ಟಿ, ಶಶಿಕಾಂತ ಧನವಾಡೆ, ಚಂದ್ರಕಾಂತ ಲಂಗೋಟೆ, ಮಾಂಜರಿ ಗ್ರಾಮದ ಪಾಂಡು ಮಾನೆ, ಪೋಪಟ ಲಾಮಖಾನೆ, ಸಂಜಯ ನರವಡೆ, ನಿತಿನ ಮಾಯನ್ನವರ, ಯಡೂರ ಗ್ರಾಮದ ಮಹೇಶ ಕಾಗವಾಡೆ, ಶಿವಾನಂದ ಕರೋಶಿ, ಅಜೀತ ಕಿಲ್ಲೇದಾರ, ಬಾಳು ಧನಗರ, ಚಂದೂರ ಗ್ರಾಮದ ಅನಿಲ ಪಾಟೀಲ, ಶರತ್ ಪಾಟೀಲ, ಶಶಿಕಾಂತ ಪಾಟೀಲ, ಸಿದ್ದು ಮಗದುಮ್, ಬಾಳಕೃಷ್ಣ ಮದ್ಯಾಪ್ಪಗೋಳ, ಮಾರುತಿ ಪಾಟೀಲ ಇದ್ದರು.
Laxmi News 24×7