Breaking News

ಹು-ಧಾ ಕಮಿಷನರ್​ ಸೇರಿದಂತೆ 25 ಐಪಿಎಸ್​ ಅಧಿಕಾರಿಗಳ ವರ್ಗ

Spread the love

ಬೆಂಗಳೂರು, ಜುಲೈ 03: ಹುಬ್ಬಳ್ಳಿಯಲ್ಲಿ (Hubballi) ಕಳೆದ ಮೂರು ತಿಂಗಳಲ್ಲಿ 3 ಕೊಲೆಗಳಾದವು. ಇಬ್ಬರು ಯುವತಿಯರು ಮತ್ತು ಓರ್ವ ಯುವಕನ ಕೊಲೆಯಾಯಿತು.

ಇದರಿಂದ ಭಯಗೊಂಡ ಹುಬ್ಬಳ್ಳಿ ಜನತೆ ಮಹಾನಗರದ ಕಾನೂನು ಸುವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಹುಬ್ಬಳ್ಳಿ-ಧಾರವಾಡ (Hubballi-Dharwad) ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್ (Renuka Sukumar)​ ಅವರನ್ನು ವರ್ಗಾವಣೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು.

ಸರಣಿ ಕೊಲೆ, ಸಾರ್ವಜನಿಕರ ಒತ್ತಡ: ಹು-ಧಾ ಕಮಿಷನರ್​ ಸೇರಿದಂತೆ 25 ಐಪಿಎಸ್​ ಅಧಿಕಾರಿಗಳ ವರ್ಗ

ಇದೀಗ ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್​ ಸೇರಿದಂತೆ ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಐಪಿಎಸ್​ ಅಧಿಕಾರಿ ರೇಣುಕಾ ಸುಕುಮಾರ್​ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಎಐಜಿಪಿಯಾಗಿ ಬೆಂಗಳೂರು ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಎನ್. ಶಶಿಕುಮಾರ್​ ಅವರನ್ನು ನೇಮಿಸಲಾಗಿದೆ.


Spread the love

About Laxminews 24x7

Check Also

ಚಿಕ್ಕೋಡಿ: ₹18 ಲಕ್ಷಕ್ಕೆ ಎತ್ತು ಖರೀದಿ

Spread the love ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ