Breaking News

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಅಂತ ಹೇಳಿದ್ದು ಚಂದ್ರಶೇಖರ ಶ್ರೀಗಳು :C.M.ಡಿಸ್ಟರ್ಬ್ಡ್

Spread the love

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ತಲುಪಿದ್ದಾರೆ. ದೆಹಲಿ ಭೇಟಿಯ ಉದ್ದೇಶವನ್ನು ಮುಖ್ಯಮಂತ್ರಿಯವರು ಬೆಳಗ್ಗೆ ಬೆಂಗಳೂರಲ್ಲಿ ಹೇಳಿದ್ದರು.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಂಜೂರು ಮಾಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಅವುಗಳಿಗಾಗಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಬಗ್ಗೆ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ಇಂದು ಬೆಂಗಳೂರಲ್ಲಿ ಚಂದ್ರಶೇಖರ ಶ್ರೀಗಳು ಆಡಿದ ಮಾತಿನ ಬಗ್ಗೆ ಶಿವಕುಮಾರ್ ಸಮ್ಮುಖದಲ್ಲೇ ಕೇಳಿದಾಗ ಸಿದ್ದರಾಮಯ್ಯ ನಿಸ್ಸಂದೇಹವಾಗಿ ಡಿಸ್ಟರ್ಬ್ಡ್ ಅದರು.

ಆದರೆ ಅವರು ಅದನ್ನು ಆಗ ತೋರಿಸಿಕೊಳ್ಳದೆ ಅದಾದ ಮೇಲೆ ಕೇಳಿದ ಪ್ರಶ್ನೆಯ ಸಂದರ್ಭದಲ್ಲಿ ಬಹಿರಂಗಗೊಳಿಸಿದರು. ಶ್ರೀಗಳು ಏನು ಹೇಳಿದ್ದಾರಪ್ಪ? ನಮ್ಮಲ್ಲಿರೋದು ಪ್ರಜಾಪ್ರಭುತ್ವ ವ್ಯವಸ್ಥೆ, ಹೈಕಮಾಂಡ್ ಹೇಳಿದಂತೆ ಎಲ್ಲವೂ ನಡೆಯುತ್ತದೆ, ಪಾಪ ಶ್ರೀಗಳಿಗೆ ಇದೆಲ್ಲ ಗೊತ್ತಿಲ್ಲ ಎಂದರು.

ನಂತರ ಪತ್ರಕರ್ತರೊಬ್ಬರು ಪ್ರಧಾನಿ ಮೋದಿಯವರವ ಜೊತೆ ಭೇಟಿ ಬೆಳಗ್ಗೆ 8ಗಂಟೆಗಾ ಅಥವಾ ಸಾಯಂಕಾಲ 8 ಗಂಟೆಗಾ ಅಂತ ಕೇಳಿದಾಗ ರೇಗುವ ಅವರು ರಾತ್ರಿ 8ಗಂಟೆಗೆ ಅಂತ ಆಗ್ಲೇ ಹೇಳಲಿಲ್ವೇನಯ್ಯ ಅಂತ ಸಿಡುಕುತ್ತಾರೆ.


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ