Breaking News

ಬೆಳಗಾವಿ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ಕೆಟ್ಟು ನಿಂತಿರುವ ಹಳೆಯ ಆಂಬುಲೆನ್ಸ್‌ಗಳು

Spread the love

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ಕೆಟ್ಟು ನಿಂತಿರುವ ಹಳೆಯ ಆಂಬುಲೆನ್ಸ್‌ಗಳು ದೂಳು ತಿನ್ನುತ್ತಿವೆ. ಕೆಲವು ವಾಹನಗಳ ಕಿಟಕಿ, ಬಾಗಿಲು ಮುರಿದಿದ್ದರೆ, ಹಲವು ವಾಹನಗಳು ತುಕ್ಕು ಹಿಡಿಯುತ್ತಿವೆ.

50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ ಜನರಿಗೆ ಈ ಆಂಬುಲೆನ್ಸ್‌ಗಳು ಉತ್ತಮ ಸೇವೆ ಒದಗಿಸಿದ್ದವು.

ತ್ವರಿತವಾಗಿ ರೋಗಿಗಳು ಆಸ್ಪತ್ರೆ ಸೇರಲು ನೆರವಾಗಿದ್ದವು. ಇದರೊಂದಿಗೆ ಬೇರೆ ಐದು ವಾಹನಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಲಾಗುತ್ತಿತ್ತು. ಆದರೆ, ’15 ವರ್ಷ ಮೀರಿದ ವಾಹನ ಬಳಸುವಂತಿಲ್ಲ’ ಎಂಬ ಕೇಂದ್ರ ಸರ್ಕಾರದ ನಿಯಮದಿಂದಾಗಿ ಮೂಲೆ ಸೇರಿವೆ.ಬೆಳಗಾವಿ: ದೂಳು ತಿನ್ನುತ್ತಿವೆ ಹಳೆ ಆಂಬುಲೆನ್ಸ್‌

ಈ ವಾಹನಗಳು ಬಳಕೆಯಾಗದೆ ಇಲ್ಲಿಯೇ ನಿಂತಿರುವುದು ಇಂದು, ನಿನ್ನೆಯಿಂದಲ್ಲ. ಹಲವು ವರ್ಷಗಳಿಂದ ಅವು ಸ್ಥಳವನ್ನೇ ಬಿಟ್ಟು ಕದಲಿಲ್ಲ. ಒಂದಿಷ್ಟು ವಾಹನಗಳ ಸುತ್ತ ಹೇರಳವಾಗಿ ಗಿಡಗಂಟಿ ಬೆಳೆದಿವೆ. ಇಷ್ಟೊತ್ತಿಗೆ ಅವುಗಳನ್ನು ಗುಜರಿಗೆ ಹಾಕಬೇಕಿತ್ತು. ಸರ್ಕಾರಿ ನಿಯಮಾನುಸಾರ ಆಗಾಗ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಆದರೆ, ಅಧಿಕಾರಿಗಳು ಆ ಗೋಜಿಗೆ ಹೋಗಿಲ್ಲ.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಒಳಗೊಂಡ ಆವರಣವು ಇಲ್ಲಿಗೆ ಬರುವವರಿಗೆ ಆರೋಗ್ಯದ ಮಹತ್ವ ಸಾರಬೇಕಿತ್ತು. ಆದರೆ, ಇಲ್ಲಿ ಎಲ್ಲೆಂದರಲ್ಲಿ ಕೆಟ್ಟುನಿಂತ ವಾಹನಗಳು ಅನಾರೋಗ್ಯ ಬಿಂಬಿಸುವಂತಿದ್ದು, ಅವ್ಯವಸ್ಥೆ ದರ್ಶನ ಮಾಡಿಸುತ್ತಿವೆ. ಹಲವು ವರ್ಷಗಳಿಂದ ಹರಾಜಾಗದ್ದರಿಂದ ವಾಹನಗಳಿಗೆ ವ್ಯಯಿಸಿದ ಹಣವೂ ವ್ಯರ್ಥವಾಗುತ್ತಿದೆ’ ಎಂದು ಜನರು ಆರೋಪಿಸುತ್ತಾರೆ.


Spread the love

About Laxminews 24x7

Check Also

ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ