ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ.ಈಗಾಗಲೇ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಿಚ್ಚ ಸುದೀಪ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಈ ಪ್ರಕರಣವನ್ನು ನಾನು ಒಬ್ಬ ಕಾಮನ್ ಮ್ಯಾನ್ ರೀತಿ ನೋಡುತ್ತಿದ್ದೇನೆ. ಅವರ ಪರ ಇವರ ಪರ ಮಾತನಾಡುವುದು ತಪ್ಪಾಗುತ್ತದೆ.
ರೇಣುಕಾಸ್ವಾಮಿ ಕುಟುಂಬಕ್ಕೆ ಹಾಗೂ ಹುಟ್ಟಬೇಕಾಗಿರುವ ಅವರ ಮಗುವಿಗೆ ನ್ಯಾಯ ಸಿಗಬೇಕು. ಕಾನೂನಿನ ಮೇಲೆ ಜನರಿಗೆ ನಂಬಿಕೆ ಬರುವಂತಹ ಕೆಲಸ ನಡೆಯುತ್ತಿದೆ.
ಸತ್ಯಾಂಶ ಹೊರಬರಲೆಂದು ಪೊಲೀಸರು, ಮಾಧ್ಯಮದವರು ಕೆಲಸ ಮಾಡಿದ್ದಾರೆ. ಕಾನೂನಿನ ಮೇಲೆ ನಂಬಿಕೆ ಬರುವ ಕೆಲಸ ಆಗಲಿ ಎಂದು ಹೇಳಿದ್ದಾರೆ.
Laxmi News 24×7