Breaking News

ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಊಟ ಇಲ್ಲ- ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡಿತಾ ಬ್ರಿಮ್ಸ್?

Spread the love

ಬೀದರ್: ಕೋವಿಡ್ 19 ನಿರ್ವಹಣೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡ್ತಿದೆ. ಆದರೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೌಕರ್ಯಗಳು ಸಿಗ್ತಿದ್ಯಾ ಅನ್ನೋ ಪ್ರಶ್ನೆ ಮೂಡಲು ಗಡಿ ಜಿಲ್ಲೆಯ ಸೋಂಕಿತರ ಆಕ್ರೋಶವೇ ಕಾರಣವಾಗಿದೆ

ಹೌದು. ಮುಂಬೈ ಕಂಟಕದಿಂದ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗ್ತಿದ್ದು ಸೋಂಕಿತರ ಸಂಖ್ಯೆ ತ್ರಿಶತಕದತ್ತ ಬಂದು ನಿಂತಿದೆ. ಹೀಗಿದ್ದರೂ ಬ್ರಿಮ್ಸ್ ಆಸ್ಪತ್ರೆ ಕೋವಿಡ್ ವಿಶೇಷ ವಾರ್ಡಿನಲ್ಲಿರೋ 124 ಸೋಂಕಿತರಿಗೆ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡ್ತಿರುವ ಆರೋಪ ಕೇಳಿಬಂದಿದೆ. ವಿಶೇಷ ವಾರ್ಡಿನಲ್ಲಿ ಸೋಂಕಿತ ಗರ್ಭಿಣಿಯರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆಲ್ಲಾ ಸರಿಯಾದ ಊಟ, ನೀರು ಸೇರಿ ಯಾವುದೇ ಮೂಲಭೂತ ಸೌಕರ್ಯ ನೀಡ್ತಿಲ್ಲವಂತೆ. ಇದರಿಂದ ಬೇಸತ್ತ ಸೋಂಕಿತರು ಸ್ವತಃ ತಾವೇ ವಿಡಿಯೋ ಮಾಡಿ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 270 ಪಾಸಿಟಿವ್ ಕೇಸ್ ದೃಢವಾಗಿವೆ. ಇದರಲ್ಲಿ 140 ಮಂದಿ ಮಹಾಮಾರಿಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈಗಾಗಲೇ 6 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಇನ್ನೂ ಬಲಿ ಪಡೆಯಲು ಹೊಂಚುಹಾಕ್ತಿದೆ. ಇಂತಹ ಹೊತ್ತಲ್ಲಿ ಸೋಂಕಿತರಿಗೆ ಒಳ್ಳೆಯ ಚಿಕಿತ್ಸೆ ನೀಡಿ ಕೊರೊನಾದಿಂದ ರಕ್ಷಿಸಬೇಕಾದ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮಾಡ್ತಿರೋದು ವಿಪರ್ಯಾಸದ ಸಂಗತಿ.

ಸೋಂಕಿನಿಂದ ಮೊದಲೇ ಕುಗ್ಗಿ ಹೋಗಿರುವ ಜನರಿಗೆ ಆತ್ಮಸ್ಥೈರ್ಯ ನೀಡಬೇಕಿದ್ದ ವೈದ್ಯರು ಈ ರೀತಿ ನಿರ್ಲಕ್ಷ್ಯ ಮಾಡ್ತಿರೋದು ಶೋಚನೀಯವಾಗಿದೆ. ಸರ್ಕಾರ ಕೋಟಿ ಕೋಟಿ ಖರ್ಚು ಮಾಡ್ತಿದ್ರೂ ಸೋಂಕಿತರು ವಿಶೇಷ ವಾರ್ಡ್ ಗಳಲ್ಲಿ ಇರಲು ಭಯಪಡ್ತಿದ್ದಾರೆ.


Spread the love

About Laxminews 24x7

Check Also

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಗ್ರ ಸಿದ್ಧತೆ:D.C.

Spread the loveಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ