ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕರುಳಿನ ಸಮಸ್ಯೆ ಹಿನ್ನೆಲೆಯಲ್ಲಿ ವಿನೋದ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ವಿನೋದ್ ರಾಜ್ ಕೆಲ ವರ್ಷಗಳ ಹಿಂದೆ ಹಾರ್ಟ್ ಆಪರೆಷನ್ ಗೆ ಒಳಗಾಗಿದ್ದರು. ಈ ವೇಳೆ ಹಾರ್ಟ್ ಗೆ ಸ್ಟಂತ್ ಅಳವಡಿಸಲಾಗಿತ್ತು. ಈಗ ಅದೇ ಸ್ಟಂಟ್ ನಿಂದಾಗಿ ಕರುಳಿನ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.
ವಿನೋದ್ ರಾಜ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಎರಡು ದಿನಗಲಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
Laxmi News 24×7