ಬೆಂಗಳೂರು, : ಶಿಗ್ಗಾಂವಿ ಕ್ಷೇತ್ರಕ್ಕೆ(Shiggaon)ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷ ಯಾರನ್ನೇ ನಿಲ್ಲಿಸಿದರೂ ನಮ್ಮ ಬೆಂಬಲ ಇದೆ ಎಂದು ನೂತನ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಹೆಸರು ಕೇಳಿ ಬರೋದು ಸಹಜ. ಆದರೆ ಆಥರದ ಪ್ರಸ್ತಾವನೆ ನಮ್ಮ ಕಡೆಯಿಂದ ಇಲ್ಲ. ಇದರಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಉದಾಸಿಗೇ ಕೊಡಲಿ, ಯಾರಿಗೇ ಕೊಡಲಿ ಅದು ಪಕ್ಷಕ್ಕೆ ಬಿಟ್ಟಿದ್ದು. ಯಾರಿಗೇ ಟಿಕೆಟ್ ಕೊಟ್ಟರೂ ನನಗೂ ಶಿಗ್ಗಾಂವಿ ಕ್ಷೇತ್ರಕ್ಕೂ ಇರುವ ಅವಿನಾಭವ ಬಾಂಧವ್ಯಕ್ಕೆ ಧಕ್ಕೆ ಬರಲ್ಲ. ಹಾಗಾಗಿ ಯಾರಿಗೆ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ. ನಾನು ಕ್ಷೇತ್ರದ ಜನತೆಯ ಮನೆ ಮಗ, ಅಣ್ಣ, ತಮ್ಮ, ಅವರ ಮನೆಯ ಸದಸ್ಯ ಎಂದು ಹೇಳಿದ್ದಾರೆ.