ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳನ್ನು ಪಡೆಯದೆ ಇದದರಿಂದ ಇದೀಗ ಕಾಂಗ್ರೆಸ್ ಹಲವು ಶಾಸಕರು ನಾಲಿಗೆ ಹರಿಬಿಡುತ್ತಿದ್ದಿದ್ದು, ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಶಾಸಕರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 14 ಇಲ್ಲ 15 ಸೀಟ್ ಬರುತ್ತೆ ಅಂತ ನಮಗೆ ವಿಶ್ವಾಸವಿತ್ತು. ಆದರೆ ನಾವು ವಿಫಲರಾಗಿದ್ದೇವೆ. ಜನ ಏನು ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾವು ತಲೆಬಾಗಲೇಬೇಕಾಗುತ್ತದೆ. ನನ್ನ ಕ್ಷೇತ್ರದಲ್ಲಿ ಕೆಲವು ಲೀಡ್ ಬರುವಂತಹ ಕ್ಷೇತ್ರಗಳಲ್ಲಿ ವೋಟ್ ಬರ್ಲಿಲ್ಲ. ನಾನು ಕೂಡ ಅದನ್ನು ಪರಿಶೀಲಿರಿಶೀಲನೆ ಮಾಡುತ್ತಿದ್ದೀನಿ ಯಾಕೆ ಹೀಗಾಗಿದೆ ಎಂದು ಸೋಲು ಕಡಿಮೆಯಾಗಿರುವುದು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಜನ ತೀರ್ಮಾನ ಕೊಟ್ಟಿದ್ದಾರೆ ಸ್ವೀಕರಿಸಲೇಬೇಕು ಎಂದರು.
Laxmi News 24×7