ಮಂಡ್ಯ: ಪ್ರತಿ ವರ್ಷವೂ ಬಿತ್ತನೆ ಬೀಜ ದರ ಹೆಚ್ಚಳವಾಗುತ್ತದೆ. ಆದರೆ, ನಾವು ಯಾವುದೇ ಲಾಭದ ಉದ್ದೇಶದಿಂದ ದರ ಹೆಚ್ಚಳ ಮಾಡಿಲ್ಲ.
ಬಿತ್ತನೆ ಬೀಜವನ್ನು ರೈತರಿಂದಲೇ ಖರೀದಿಸುವುದಾಗಿದೆ. ಅದನ್ನು ರೈತರಿಗೆ ಮಾರಾಟ ಮಾಡಲಾಗುತ್ತದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಕಡಿಮೆ ದರ ಇದೆ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಯಾವುದೇ ಆತಂಕ ಇಲ್ಲ. ಪ್ರತಿ ವರ್ಷ ಜೂನ್‌ನಿಂದ ಹರಿಸಲಾಗುತ್ತಿತ್ತು. ಅದರಂತೆ ಈಗಾಗಲೇ 83 ಅಡಿ ನೀರು ಇದೆ. ನೀರಿನ ಅವಶ್ಯಕತೆ ಹಾಗೂ ಒಳಹರಿವು ನೋಡಿಕೊಂಡು ನೀರು ಹರಿಸಲು ಕ್ರಮ ವಹಿಸಲಾಗುವುದು ತಿಳಿಸಿದರು.
Laxmi News 24×7