ಚಾಮರಾಜನಗರ, : ಚಾಮರಾಜನಗರ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಹನೂರು(Hanur)ತಾಲೂಕಿನಪೊನ್ನಾಚಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪುತ್ರ ವೈದೇಶ್ ಎಂಬಾತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.
ಈ ಹಿನ್ನಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲಾಂಭಿಕೆಯ ಪುತ್ರ ವೈದೇಶ್ ಮೇಲೆ ಸಂತ್ರಸ್ಥ ಮಹಿಳೆ ದೂರು ನೀಡಿದ್ದಾರೆ.
ವಿಡಿಯೋ ವೈರಲ್ ಮಾಡೋದಾಗಿ ನಿರಂತರ ಅತ್ಯಾಚಾರ
ಗ್ರಾಮ ಪಂಚಾಯತಿ ವತಿಯಿಂದ ಮನೆ ಕಟ್ಟಿಸಿ ಕೊಡಬೇಕೆಂದರೆ ನನ್ನ ಜೊತೆ ಮಲಗಬೇಕೆಂದು ಆರೋಪಿ ಹೇಳಿದ್ದನಂತೆ.
ಜೊತೆಗೆ ಪದೇ ಪದೇ ಮಹಿಳೆಯನ್ನ ಮಂಚಕ್ಕೆ ಕರೆದು ಪೀಡಿಸುತ್ತಿದ್ದ. ಆತನ ಕಾಟ ತಾಳಲಾರದೆ ವೈದೇಶ್ನನ್ನ ಸಂತ್ರಸ್ಥೆ ಮನೆಗೆ ಕರೆದಿದ್ದಾರೆ.
ಈ ವೇಳೆ ಸಂತ್ರಸ್ಥೆ ಮನೆ ಒಳ ಹೊಕ್ಕಿ ಮಹಿಳೆಯನ್ನು ವಿವಸ್ತ್ರ ಗೊಳಿಸಿ, ಫೋಟೋ ಹಾಗೂ ವಿಡಿಯೋವನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ.
ಸಹಕರಿಸದಿದ್ರೆ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಮಾಡೋದಾಗಿ ಧಮ್ಕಿ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದಾನೆ.