ಬೆಳಗಾವಿ, ಮೇ.28: ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ(Ankali police station)ಯಲ್ಲಿ ತಡರಾತ್ರಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿತ್ತು.ಜೊತೆಗೆಠಾಣೆ ಮುಂಭಾಗದಲ್ಲಿಮದ್ಯದ ಖಾಲಿ ಬಾಟಲ್, ವಾಟರ್ ಬಾಟಲ್ ಟೇಬಲ್ ಮೇಲೆ ಇರುವ ಫೋಟೋಗಳು ವೈರಲ್ ಆಗಿತ್ತು.
ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನಲೆ ಅಂಕಲಿ ಠಾಣೆ ಹೆಡ್ ಕಾನ್ಸ್‌ಟೇಬಲ್ ರಾಮಚಂದ್ರ ಖೋತ ಎಂಬುವವರನ್ನು ಅಮಾನತುಗೊಳಿಸಿ ಎಸ್ಪಿ ಭೀಮಾಶಂಕರ ಗುಳೇದ್ ಆದೇಶಿಸಿದ್ದಾರೆ.
ಸರಕಾರಿ ವಸತಿ ಗೃಹದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಅಧಿಕಾರಿಗಳು
ಇದೇ ಮೇ.22 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸರಕಾರಿ ವಸತಿ ಗೃಹದಲ್ಲಿ ಜಿಲ್ಲಾ ಪಂಚಾಯತಿ ವಿಭಾಗದ ಜಮಖಂಡಿ ಎಇಇ ಎಮ್ಎಸ್ ನಾಯಕ,
ಇಂಜಿನಿಯರ್ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟೀಲ್, ಶ್ರೀಶೈಲ್ ಹೂಗಾರ ಹಾಗೂ ಗುತ್ತಿಗೆದಾರರಾದ ಸಾಗರ, ಶೀತಲ ಹರಿಜನ ಸೇರಿದಂತೆ ಆರು ಜನ ಗುತ್ತಿಗೆದಾರರು ಸೇರಿಕೊಂಡು ಮದ್ಯಸೇವನೆ ಮಾಡಿದ್ದರು.