Breaking News

ಅಂಜಲಿ, ನೇಹಾ ಕೊಲೆ ಪ್ರಕರಣ; ಸಿಐಡಿ ವಿಚಾರಣೆ ಬಳಿಕ ನಿರಂಜನ​​ ಹೇಳಿದ್ದಿಷ್ಟು

Spread the love

ಹುಬ್ಬಳ್ಳಿ, ಮೇ.26: ‘ನಾನು ಇವತ್ತು ಸಿಐಡಿ(CID) ಅಧಿಕಾರಿಗಳ ಸಮಯ ಕೇಳಿದ್ದೆ. ಹೀಗಾಗಿ ಅಧಿಕಾರಿಗಳ ಭೇಟಿ ಮಾಡಲು ಬಂದಿದ್ದೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಹೇಳಿದ್ದಾರೆ. ಸಿಐಡಿ ವಿಚಾರಣೆ ಬಳಿಕ ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು, ‘ ಅನೇಕ ದಿನಗಳಿಂದ ನಾನು ಭೇಟಿ ಮಾಡಲು ಆಗಿರಲಿಲ್ಲ. ಹಾಗಾಗಿ ಇವತ್ತು ಸಮಯ ಕೇಳಿದ್ದೆ. ನೇಹಾ ಕೊಲೆ ಕೇಸ್ ವಿಚಾರವಾಗಿ ಕೆಲವು ಮಾಹಿತಿ ಕೊಟ್ಟಿದ್ದೇನೆ. ಇದುವರೆಗೂ ನೇಹಾ ಕೇಸ್​ನಲ್ಲಿ ಒಬ್ಬರನ್ನ ಮಾತ್ರ ಅರೆಸ್ಟ್ ಮಾಡಿದ್ದಾರೆ. ಈ ಕುರಿತು ನಾನು  ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದೇನೆ ಎಂದರು.

ಸಂಪೂರ್ಣವಾಗಿ ಅಂಜಲಿ ಪ್ರಕರಣ ಬೇಧಿಸಬೇಕು

ಅಧಿಕಾರಿಗಳು ನಿಮಗೆ ಅನುಮಾನ ಇದ್ರೆ, ಬರೆದು ಕೊಡಿ ಎಂದು ಹೇಳಿದ್ದಾರೆ. ನಾಳೆ(ಮೇ.27) ಹುಬ್ಬಳ್ಳಿಗೆ ಸಿಐಡಿ ಡಿಜಿ ಆಗಮಿಸಲಿದ್ದು, ನಮ್ಮ ಮನೆಗೂ ಅಧಿಕಾರಿಗಳು ಬರಲಿದ್ದಾರೆ. ಇನ್ನು ಹತ್ಯೆಯಾದ ಅಂಜಲಿ ಮನೆಯಲ್ಲಿ ತಂದೆ, ಸಹೋದರ ಯಾರೂ ಇಲ್ಲ. ನಾನು ಆ ವಾರ್ಡ್ ಸದಸ್ಯನಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಅಂಜಲಿ ಹತ್ಯೆ ಕೇಸ್ ಕೂಡ ಪಾಸ್ಟ್ ಟ್ರ್ಯಾಕ್ ಕೊಡಬೇಕು. ಸಂಪೂರ್ಣವಾಗಿ ಅಂಜಲಿ ಪ್ರಕರಣವನ್ನು ಬೇಧಿಸಬೇಕು ಎಂದು ಮನವಿ ಮಾಡಿದ್ದೇನೆ.ಇದಕ್ಕೆ ಉತ್ತರಿಸಿ, ‘ನಾವು ಯಾರ ಕೈಗೊಂಬೆ ಆಗಿ ಕೆಲಸ ಮಾಡಲ್ಲ ಅಂದಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗುವ ಭರವಸೆ ಇದೆ. ನಾಳೆ(ಮೇ.27) ಸಿಐಡಿ ಡಿಜಿ ಬಂದು ನಮ್ಮ ಜೊತೆ ಮಾತಾಡಲಿದ್ದಾರೆ. ನೇಹಾ ಕೊಲೆ ಕೇಸ್ ವಿಚಾರವಾಗಿ ಡಿಜಿ ಅವರು ಚರ್ಚೆ ಮಾಡಲಿದ್ದಾರೆಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ನಾನು ನೇಹಾ ಕೊಲೆ ಕೇಸ್ ದಿಕ್ಕು ತಪ್ಪಿಸೋ ಕೆಲಸ ಆಗಬಾರದು ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ