ಕೋಲ್ಕತ್ತ: ಇಂಡಿಯಾ ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧರಿಸುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚಿತ್ರಕ್ಕೆ ಕೋಲ್ಕತ್ತದಲ್ಲಿ ಮಸಿ ಬಳಿಯಲಾಗಿದೆ.
ಇಲ್ಲಿರುವ ಕಾಂಗ್ರೆಸ್‌ನ ರಾಜ್ಯ ಕಚೇರಿಯ ಮುಂಭಾದಲ್ಲಿರುವ ಹಲವು ಪೋಸ್ಟರ್‌ಗಳಲ್ಲಿ ಖರ್ಗೆ ಅವರ ಚಿತ್ರಕ್ಕೆ ಮಸಿ ಬಳಿಯಲಾಗಿದೆ.
ಖರ್ಗೆ ಅವರ ಚಿತ್ರವಿದ್ದ ಪೋಸ್ಟರ್ ಮೇಲೆ ‘ತೃಣಮೂಲ ಕಾಂಗ್ರೆಸ್‌ನ ಏಜೆಂಟ್’ ಎಂದು ಬರೆಯಲಾಗಿದೆ.
ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಧೀರ್ ಚೌಧರಿ, ಪೊಲೀಸ್ ದೂರು ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅಲ್ಲದೆ ಪೋಸ್ಟರ್‌ಗಳನ್ನು ತೆರವುಗೊಳಿಸುವಂತೆಯೂ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅವರು ತಮ್ಮ ತವರು ಕ್ಷೇತ್ರ ಬರರಾಂಪುರದಲ್ಲಿ ಇದ್ದಾರೆ.