Breaking News

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Spread the love

ಬೀದರ್: ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್ ಟ್ಯಾಂಕ್ ಕವರ್ ನಲ್ಲಿ ಇಟ್ಟಿದ್ದ 1.37 ಲಕ್ಷ ರೂ‌ ಕಳವಾಗಿದೆ.

ಬಸವಕಲ್ಯಾಣ ನಗರದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಇಲ್ಲಿನ ನಬಿಯುದ್ದೀನ್ ಶೇಖ್ ಎಂಬುವರಿಗೆ ಸೇರಿದ ಹಣ ಕಳುವಾಗಿದೆ.Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಸಿಸಿ ಟಿವಿಯಲ್ಲಿ ಹಣ ದೋಚಿದ ದೃಶ್ಯ ಸೆರೆಯಾಗಿದೆ.

ಬ್ಯಾಂಕ್ ನಲ್ಲಿ ಹಣ ತುಂಬಲು ಬಂದಿದ್ದ ನಬಿಯುದ್ದೀನ್ ಶೇಖ್ ಅವರಿಗೆ ಸಿಬ್ಬಂದಿಯು ಪ್ಯಾನ್ ಕಾರ್ಡ್ ಗೆ ಆಧಾರ ಲಿಂಕ್ ಮಾಡಲು ಸೂಚಿಸಿದ್ದರು. ಅದಕ್ಕಾಗಿ ಶೇಖ್ ಅವರು ಸಮೀಪದ ಮೊಬೈಲ್‌ ಅಂಗಡಿಗೆ ಹೋದಾಗ ಖದೀಮ ಕೈಚಳಕ ತೋರಿದ್ದಾನೆ.

ಬಸವಕಲ್ಯಾಣ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ