ನಟ ವಿಜಯ್ ಸೂರ್ಯ ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ. ಗುಳಿ ಕೆನ್ನೆ, ಕ್ಯೂಟ್ ಸ್ಮೈಲ್, ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ವಿಜಯ್ ಸೂರ್ಯ ಕೆಲವು ಹುಡುಗಿಯರಿಗೆ ಫಾರೆವರ್ ಕ್ರಶ್. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟ ವಿಜಯ್ ಸೂರ್ಯ ಇಷ್ಟ ಕಾಮ್ಯ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲೂ ಮಿಂಚಿದ್ದರು.

ನಟನೆಯಿಂದ ಸ್ವಲ್ಪ ಸಮಯ ವಿರಾಮದಲ್ಲಿದ್ದ ವಿಜಯ್ ಸೂರ್ಯ ಮತ್ತೆ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮನ್ನು ತೆರೆ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇತ್ತಿಚಿಗೆ ನಮ್ಮ ಲಚ್ಚಿ ಧಾರಾವಾಹಿ ಕೂಡ ಅಂತ್ಯವಾಗಿದ್ದು, ಮತ್ತೆ ವಿಜಯ್ ಸೂರ್ಯ ಅವರ ಮುಂದಿನ ಧಾರಾವಾಹಿ ಅಥವಾ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ನಡುವೆಯೇ ನಟ ವಿಜಯ್ ಸೂರ್ಯ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಹೌದು ಈ ಬಾರಿಯ ಅಮ್ಮಂದಿರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿಕೊಂಡಿರುವ ವಿಜಯ್ ಸೂರ್ಯ ಅಂದೇ ತಮ್ಮ ಹೆಸರು ಬದಲಿಸಿಕೊಂಡಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ‘ಇಂದಿನಿಂದ ನಾನು ನನ್ನ ಹೆಸರನ್ನು ‘ವಿಜಯ್ ಲಲಿತಾ ಸೂರ್ಯʼ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು’ ಎಂದು ಹೇಳುವ ಮೂಲಕ ತಮ್ಮ ಹೆಸರನ್ನು ಬದಲಿಸಿಕೊಂಡಿರುವ ಬಗ್ಗೆ ವಿಜಯ್ ಸೂರ್ಯ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ವಿಜಯ್ ಸೂರ್ಯ, ‘ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ. ಎಂ.ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ. Happy Mother’s Day Amma.
Laxmi News 24×7