ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಸದಲಗಾ ಪಟ್ಟಣದ ಬಳಿ ದೂಧಗಂಗಾ ನದಿಗೆ ಸ್ನಾನಕ್ಕೆ ತೆರಳಿದ್ದ ಮಹಾದೇವ ಪುನ್ನಪ್ಪ ಖುರೆ (72) ಎಂಬುವರು ಮೊಸಳೆ ದಾಳಿಗೆ ಸಿಲುಕಿ, ಮೃತಪಟ್ಟಿದ್ದಾರೆ.

ಅವರು ಈಜುತಿದ್ದ ವೇಳೆ ಕಾಲನ್ನು ಮೊಸಳೆ ಎಳೆದೊಯ್ಯಿತು. ಅವರ ಮೃತದೇಹ ಪತ್ತೆಯಾಗಿದೆ ಎಂದು ಸದಲಗಾ ಠಾಣೆ ಪೊಲೀಸರು ತಿಳಿಸಿದ್ದಾರೆ.
Laxmi News 24×7