Breaking News

ಪ್ರಜ್ವಲ್ ಪ್ರಕರಣ: ಬಿಜೆಪಿ -ಜೆಡಿಎಸ್‌ ಮೈತ್ರಿ ಮುರಿದು ಬೀಳುತ್ತಾ? : ಕುಮಾರಸ್ವಾಮಿ ಏನಂದ್ರು?

Spread the love

ಬೆಂಗಳೂರು, ಮೇ 08: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಅಬ್ಬರದ ಪ್ರಚಾರ ನಡೆಸುವ ಹೊತ್ತಲಿ ಹಾಸನ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಪ್ರಕರಣ ಸದ್ದು ಮಾಡಿದೆ.

ಇತ್ತ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಕುರಿತು ಕಿಡಿಕಾರಿದ್ದಾರೆ.

ಇತ್ತ ಲೋಕಸಭಾ ಚುಣಾವಣೆಗೆ ಮಾತ್ರ ಈ ಮೈತ್ರಿ ಸೀಮಿತವಲ್ಲ ಎಂದು ಹೇಳಿಕೆ ನೀಡಿದ ಬಿಜೆಪಿ ನಾಯಕರೇ ಇದೀಗ ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ತೀವ್ರ ಮುಜುಗರವನ್ನ ಅನುಭವಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್‌ ನಾಯಕರಿಗೆ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವೇ ಅಸ್ತ್ರವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೈತ್ರಿ ಕುರಿತು ಬಿಜೆಪಿ ನಾಯಕರ ನಡುವೆ ಅಪಸ್ವರ ಕೇಳಿಬರುತ್ತಿದೆ.

ಮೈತ್ರಿ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮಾತನಾಡಿ, ಈ ಪ್ರಕರಣ ಮೈತ್ರಿ ಮೇಲೆ ಪರಿಣಾಮ ಬೀರುತ್ತೋ ಇಲ್ವೋ ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಮೈತ್ರಿ ದೀರ್ಘ ಕಾಲ ಇರಬೇಕು ಅಂತ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಮುಜುಗರ ಆದ್ರೆ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಈ ಮೈತ್ರಿ ಯಿಂದಲೇ ಕಾಂಗ್ರೆಸ್ ನಿದ್ದೆಗೆಟ್ಟಿದೆ ಎಂದು ಹೇಳಿದರು.

ಸಂಸದ ಪೆನ್ ಡ್ರೈವ್ ಕುಟುಂಬ ಎಂದು ಸಂಸದ ಸುರೇಶ್ ಹೇಳುತ್ತಾರೆ. ನಿಮ್ಮದು ಏನೇನು ಓಡಾಡ್ತಿದೆ ಎನ್ನೋದು ಗೊತ್ತಿಲ್ಲವೇ ಸುರೇಶು? ಬೇಕಾದಷ್ಟು ಇವೆ, ಇನ್ನೂ ಬೇಕಾದಷ್ಟು ಬರುತ್ತವೆ, ನಿರೀಕ್ಷಿಸಿ ಎಂದು ತಿರುಗೇಟು ಕೊಟ್ಟರು. ಹಾಸನ ಸಭೆಯಲ್ಲಿ ನನ್ನ ಮಗ ಎಂದು ಹೇಳಿದ್ದೆ. ಚುನಾವಣೆ ವೇಳೆ ಹೇಳಿದ್ದೆ. ಆದರೆ ಈ ರೀತಿ ಅಂತ ಗೊತ್ತಿರಲಿಲ್ಲ ನನಗೆ? ಅಲ್ಲಿನ ಕಾರ್ಯಕರ್ತರು ಪ್ರಜ್ವಲ್, ಹಿರಿಯರಿಗೆ ಗೌರವ ಕೊಡಲ್ಲ, ಅಭ್ಯರ್ಥಿ ಬದಲಾವಣೆ ಮಾಡಿ ಎಂದು ನನ್ನ ಬಳಿ ಹೇಳಿದ್ದರು. ಅದಕ್ಕಾಗಿ ಅಭ್ಯರ್ಥಿ ಬದಲಾವಣೆ ಮಾಡಲು ತೀರ್ಮಾನ ಮಾಡಿದ್ದೆ ಇದು ತಪ್ಪಾ? ಅಶ್ಲೀಲ ವಿಡಿಯೋಗಳ ವಿಷಯ ನನಗೆ ಗೊತ್ತಿರಲಿಲ್ಲ. ಹೌದು, ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ ಎಂದು ಕೇಳಿದ್ದೆ. ಅದನ್ನೆ ದೊಡ್ಡದು ಮಾಡಿದರು ಕೆಲವರು. ರಕ್ತ ಸಂಬಂಧ ಇಲ್ಲ ಎಂದು ಹೇಳಿಲ್ಲ, ಆಮೇಲೆ ನಾವು ಬೇರೆ ಇದ್ದೇವೆ ಎಂದಷ್ಟೇ ಹೇಳಿದ್ದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಈ ತನಿಖೆಯಲ್ಲಿ ಎಸ್ ಐಟಿ ಯವರಿಗೆ ದೂರು ನೀಡಲು ಸಂತ್ರಸ್ತೆಯರು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರಿಯಾಗಿ ಹುಡುಕಿದರೆ ಯಾರು ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ದೂರು ಕೊಡಿಸಿದ್ದಾರೆ ಎಂದು ಹೊರಗೆ ಬರಲಿದೆ ಎಂದು ಅವರು ಹೇಳಿದರು. ಪ್ರಜ್ವಲ್ ರೇವಣ್ಣ, ರೇವಣ್ಣ ಅವರಿಗೆ ಬ್ಲೂ ಕಾರ್ನರ್, ರೆಡ್ ಕಾರ್ನರ್ ನೋಟಿಸ್ ಗಳನ್ನು ಕೊಡಿ, ಸಂತೋಷ. ಆದರೆ, ಡಾ.ಜಿ.ಪರಮೇಶ್ವರ್ ಅವರೇ.. ನೀವು ಗೃಹ ಸಚಿವರಿದ್ದೀರಿ.. ಆ 5 ಜನ ಹೆಣ್ಣುಮಕ್ಕಳ ಮಾನ ತೆಗೆದ್ರಲ್ಲ, ಇಡೀ ರಾಜ್ಯದಲ್ಲಿ ಪೆನ್ ಡ್ರೈವ್ ಬಿಟ್ರಲ್ಲ. ಇವರ ಮೇಲೆ ಯಾವ ಲುಕ್ ಔಟ್ ನೋಟಿಸ್ ಕೊಟ್ರಿ, ಅವರನ್ನು ಟಚ್ ಮಾಡಿಲ್ಲ. ನಮ್ಮನ್ನು ಹೆದರಿಸುತ್ತೀರಾ? ನಾವು ಹೆದರಿ ಹೋಗೋದಿಲ್ಲ. ಇಲ್ಲೆ ಇರುತ್ತೇವೆ.

ಇದು ಕುಟುಂಬದ ಜಗಳ ಎಂದು ಕೆಲವರು ಹೇಳಿದ್ದಾರೆ. ಸಚಿವ ಕೃಷ್ಣ ಭೈರೇಗೌಡ ಇದು ವಿಶ್ವದಲ್ಲಿಯೇ ದೊಡ್ಡ ಪ್ರಕರಣ ಎಂದಿದ್ದಾರೆ. ಅವರಿಗೆಲ್ಲ ಬಡವರ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ಗೊತ್ತಿದೆ. ಕಾರು ಚಾಲಕ ಕಾರ್ತೀಕ್ ಹಾಸನದಲ್ಲಿ ಜಾಮೀನು ಅರ್ಜಿ ಹಾಕಿದ್ದಾನೆ. ಅಲ್ಲಿ ಹಾಕಲು ಬರುವುದಿಲ್ಲ, ಎಸ್ ಐಟಿಯವರು ಏನು ಮಾಡ್ತಿದ್ದಾರೆ? ನಿನ್ನೆಯ ದಿನ ಆ ಡಿಸಿಎಂ ಮುಖ ನೋಡಿದರೆ ಗೊತ್ತಾಗುತ್ತದೆ. ಅವರ ಪರಿಸ್ಥಿತಿ ಬಾಲ ಸುಟ್ಟ ಬೆಕ್ಕಿನಂತೆ ಆಗಿದೆ.

ದೇವೆಗೌಡರ ಕುಟುಂಬ ನಾಶ ಮಾಡಲು ಎಲ್ಲ ಪ್ಲಾನ್ ಆಗಿದೆ ಎಂದು ಒಬ್ಬ ಮಧ್ಯವರ್ತಿ ಹೇಳಿದ್ದಾನೆ. ಅದು ಆತನ ಜನ್ಮದಲ್ಲಿ ಬರೆದಿಲ್ಲ. ವಕೀಲ ದೇವರಾಜ್ ಗೌಡರು ಸತ್ಯ ಹೇಳಿದ ಮೇಲೆ ಇವರ ಮುಖ ಚಹರೆ ಬದಲಾಗಿದೆ. ಹಿಂದೆ ಇದೇ ಗ್ಯಾಂಗ್ ಬೆಳಗಾವಿ ಶಾಸಕರೊಬ್ಬರ ಸಿಡಿ ಮಾಡಿ ಲೀಕ್ ಮಾಡಿತ್ತು. ಅದನ್ನು ₹30ರಿಂದ 40 ಕೋಟಿ ಖರ್ಚು ಮಾಡಿ ಈ ಮಹಾನಾಯಕನೇ ಅದನ್ನೆಲ್ಲಾ ಮಾಡಿದ್ದು. ಅಷ್ಟು ಕೋಟಿ ಖರ್ಚಾಯ್ತು ಅಂತ ಈ ಮಹಾ ನಾಯಕನೇ ಹೇಳಿರುವ ಆಡಿಯೋ ಇದೆ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ