Breaking News

ಭವಾನಿ ರೇವಣ್ಣರಿಗೂ ಕಾನೂನು ಸಂಕಷ್ಟ?

Spread the love

 ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಕಾಣೆಯಾಗಿರುವ ಬಗ್ಗೆ ಕೆಆರ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರ ಬಂಧನವಾಗಿದೆ. ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ.

 

ಬೆಂಗಳೂರು, ಮೇ 06: ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಮತ್ತು ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಅಲ್ಲದೆ ಹೆಚ್​ಡಿ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಅಪಹರಣ ಪ್ರಕರಣವೂ ದಾಖಲಾಗಿದೆ. ಪತಿ ಮತ್ತು ಪುತ್ರನ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavni Revanna) ಅವರ ಹೆಸರೂ ಉಲ್ಲೇಖವಾಗಿದ್ದು ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ. ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದಲ್ಲೂ ಭವಾನಿ ರೇವಣ್ಣ ಅವರ ಹೆಸರು ಕೇಳಿಬಂದಿದೆ.

ಈ ಎರಡು ಪ್ರಕರಣದಲ್ಲಿ ಕಿಡ್ನಾಪ್​​ ಕೇಸ್​ ಭವಾನಿ ರೇವಣ್ಣ ಅವರಿಗೆ ಹೆಚ್ಚು ಮುಳುವಾಗುವ ಸಾಧ್ಯತೆ ಇದೆ. ಏಕೆಂದರೆ ಕಿಡ್ನಾಪ್ ಕೇಸ್​ನಲ್ಲಿ “ಭವಾನಿ ರೇವಣ್ಣ ಅವರು ನಿಮ್ಮನ್ನು ಕರೆದುಕೊಂಡು ಬಾ ಅಂತ ಹೇಳಿದ್ದಾರೆ” ಎಂದು ಹೇಳಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ. ಹೀಗಾಗಿ ಕಿಡ್ನಾಪ್ ಕೇಸ್​ನಲ್ಲಿ ಭವಾನಿ ರೇವಣ್ಣಗೆ ಕಾನೂನು ಕಂಟಕ ಎದುರಾಗು ಸಾಧ್ಯತೆ ಇದೆ.

ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಭವಾನಿ ರೇವಣ್ಣಗೆ ನೊಟೀಸ್ ನೀಡಿ ಮಾಹಿತಿ ಪಡೆದಿದೆ. ತನಿಖೆ ವೇಳೆ ಏನಾದರೂ ಭವಾನಿ ವಿರುದ್ಧ ಸಾಕ್ಷಾಧಾರಗಳು ಸಿಕ್ಕರೇ ಆಗ ಅವರು ಕೂಡ ಬಂಧನವಾಗುವ ಸಾಧ್ಯತೆ ಇದೆ.

ಭವಾನಿ ರೇವಣ್ಣ ಸಂಬಂಧಿಯ ಬಂಧನ

ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎನ್ನಲಾದ ಕೆಆರ್​ ನಗರದ ಸಂತ್ರಸ್ತೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರ ಸಂಬಂಧಿಯೊಬ್ಬರನ್ನು ಎಸ್​ಐಟಿ ಅಧಿಕಾರಿಗಳು ಗುರುವಾರ (ಮೇ 02) ರಂದು ಬಂಧಿಸಿದ್ದರು. ಇದು ಪ್ರಜ್ವಲ್​ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿತ್ತು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ