ಬೆಂಗಳೂರು : ಜೆಡಿಎಸ್ (JDS) ಶಾಸಕರು ಸಾಮೂಹಿಕವಾಗಿ ಪಕ್ಷ ತೊರೆದು ಕಾಂಗ್ರೆಸ್ (Congress) ಸೇರಲಿದ್ದಾರೆ ಎಂಬ ವದಂತಿಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ಪ್ರತಿಕ್ರಿಯಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದುವರೆಗೂ ಯಾರೂ ನನ್ನ ಸಂಪರ್ಕಕ್ಕೆ ಬಂದಿಲ್ಲ ಎಂದರು.
ಇದೆಲ್ಲವೂ ಸುಳ್ಳು ಸುದ್ದಿಯಾಗಿದೆ. ನಾನು ಈ ಕುರಿತು ಯಾರನ್ನೂ ಸಂಪರ್ಕಿಸಿಲ್ಲ. ನನ್ನನ್ನೂ ಸಹ ಯಾವ ಶಾಸಕರೂ ಸಂಪರ್ಕ ಮಾಡಿಲ್ಲ. ಅದ್ಯಾರು ಈ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ ಎಂದು ನುಡಿದಿದ್ದಾಋಎ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಳಿಕ ಜೆಡಿಎಸ್ ಪ್ರಭಾವ ಕುಗ್ಗುತ್ತಿರುವ ಹಿನ್ನೆಲಯಲ್ಲಿ ಹಲವು ಜೆಡಿಎಸ್ ಶಾಕಸರು ಮುಜುಗರಕ್ಕೀಡಾಗಿದ್ದರು. ಕೆಲ ಜೆಡಿಎಸ್ ಶಾಸಕರು ನೇರವಾಗಿ ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಜ್ವಲ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
Laxmi News 24×7