Breaking News

ನಾವೇನು ಹೈಕಮಾಂಡ್ ಗುಲಾಮರಾ? : ಕೆಎನ್ ರಾಜಣ್ಣ ಕೆಂಡ

Spread the love

ತುಮಕೂರು: ದೆಹಲಿಯಲ್ಲಿ (Delhi) ಕೂತು ಪಟ್ಟಿಮಾಡಿ ಲಾಟರಿ ಟಿಕೆಟ್ ಹಂಚುವಂತೆ ಹಂಚಿದರೆ ಹೇಗೆ? ಎಂದು ನಿಗಮ ಮಂಡಳಿ ಆಯ್ಕೆ ವಿಚಾರವಾಗಿ ಹೈಕಮಾಂದ್ ವಿರುದ್ಧ ಕೆ.ಎನ್.ರಾಜಣ್ಣ (KN Rajanna) ಗುಡುಗಿದ್ದಾರೆ.

ಈ ಬಗ್ಗೆ ತುಮಕೂರಿನಲ್ಲಿ (Tumkur) ಮಾತನಾಡಿದ ಅವರು, ನಮ್ಮನ್ನು ಕೇಳಿ ನಿಗಮ ಮಂಡಳಿಗೆ ಆಯ್ಕೆ ಮಾಡಬೇಕಾ ಅಥವಾ ದೆಹಲಿಯಲ್ಲಿ ಕುಂತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದರೆ ಹೇಗೆ?

ನಮಗೊಂದು ಮಾತು ಕೇಳಬೇಕಲ್ಲ. ಸ್ಥಳೀಯವಾಗಿ ಯಾರ್ಯಾರು ಕೆಲಸ ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ನಾವೇನು ಗುಲಾಮಾರಾ, ನಾವು ಅದನ್ನೆಲ್ಲಾ ಸಹಿಸೋದಿಲ್ಲ ಎಂದು ಕಿಡಿಕಾರಿದ್ದಾರೆ.

ಮೊದಲೆಲ್ಲ ಸಿಎಂಗೆ, ಅಧ್ಯಕ್ಷರಿಗೆ ಜವಾಬ್ದಾರಿ ಕೊಡುತ್ತಿದ್ದರು. ಆದರೀಗ ಹಾಗಲ್ಲ. ಈಗ ಹೊಸ ಹೈಕಮಾಂಡ್, ನಮ್ಮ ಮೇಲೆ ಈ ರೀತಿಯ ಸವಾರಿ ಮಾಡೋದನ್ನ ನಾವು ಸಹಿಸೋದಿಲ್ಲ. ಇಡೀ ರಾಜ್ಯದಲ್ಲಿ ಅದೇ ಆಗಿದೆ. ಸಚಿವ ಜಿ.ಪರಮೇಶ್ವರ (G. Parameshwar) ಮಾತ್ರ ಅಲ್ಲ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಇದೇರೀತಿ ಮಾಡಿದರೆ ಅವರೇ ಬಂದು ಗೆಲ್ಲಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.


Spread the love

About Laxminews 24x7

Check Also

SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್

Spread the loveಮಂಗಳೂರು, ಸೆಪ್ಟೆಂಬರ್​ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ.  ಇಷ್ಟು ದಿನ ಬುರುಡೆ ಕಥೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ