Breaking News

ST CERTIFICATE: ಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗದವರಿಗೆ ಎಸ್ಟಿ ಪ್ರಮಾಣ ಪತ್ರ

Spread the love

ಬೆಂಗಳೂರು: ಕಲಬುರ್ಗಿ (kalburgi), ಬೀದರ್ (bidar) ಮತ್ತು ಯಾದಗಿರಿ (yadgiri) ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು (kodagu) ಜಿಲ್ಲೆಯ ಕುರುಬ ಜನಾಂಗದವರಿಗೆ ಪರಿಶಿಷ್ಟ ಪಂಗಡದ (ST) ಜಾತಿ ಪ್ರಮಾಣ ಪತ್ರ (Caste certificate) ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.

 

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ (cm) ಸಿದ್ದರಾಮಯ್ಯ (siddaramaiah) ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ್ದರು.

ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಲು ಕರ್ನಾಟಕ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಹಾಗೂ ಇತರೆ ಹಿಂದುಳಿದ ವರ್ಗಗಳ ಅಧಿನಿಯಮ 1990 ನಿಯಮಗಳು 1992 ರಡಿ ವಿಸ್ತ್ರತವಾಗಿ ವಿವರಿಸಲಾಗಿದೆ ಇದರ ಅನ್ವಯ ಈ ಪ್ರಮಾಣ ಪತ್ರ ನೀಡಿರುವುದಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.

2. ಬಾಕಿ ಇರುವ ಜಾತಿ/ಸಿಂಧುತ್ವ ಪ್ರಮಾಣ ಪತ್ರ ಪ್ರಕರಣಗಳನ್ನು ಎಸ್.ಸಿ/ಎಸ್.ಟಿ/ಒ.ಬಿ.ಸಿ ಮೀಸಲಾತಿ ಕಾಯ 1990 ಕಲಂ 4 (ಸಿ) (3) ರನ್ವಯ ನಿಗಧಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡುವುದು.

3. ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ಶಾಲಾ ದಾಖಲಾತಿಯನ್ನು ಸಾಕ್ಷವೆಂದು ಪರಿಗಣಿಸಿ ಎಸ್ಟಿ ಪ್ರಮಾಣ ಪತ್ರ ನೀಡತಕ್ಕದ್ದು.

4. ಗೊಂಡ, ರಾಜ ಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜನಾಂಗದವರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ಸಕಾಲದಲ್ಲಿ ನೀಡಲು ಕ್ರಮಕೈಗೊಳ್ಳಬೇಕು.

5. ಜಾತಿ ಮತ್ತು ಜಾತಿ ಆದಾಯ ಪ್ರಮಾಣ ಪತ್ರದ ನೈಜತ ಪರಿಶೀಲನೆಗಾಗಿ ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಮಂಡಿಸಿ ನಿಯಮಾನುಸಾರ ಇತ್ಯರ್ಥವದಿಸಬೇಕು.

6. ತಕರಾರು ಇದ್ದಲ್ಲಿ ನಿಯಮಾನುಸಾರ ವಿಚಾರಣೆ ಮಾಡಿ ಅರ್ಹರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು ಅರ್ಹರಿಲ್ಲದೇ ಇದ್ದರೆ ಯಾವ ಕಾರಣಕ್ಕೆ ತಿರಸ್ಕರಿಸಲಾಗುತ್ತಿದೆ ಎಂಬ ಬಗ್ಗೆ ವಿವರವಾದ ಆದೇಶವನ್ನು ನೀಡಬೇಕು.

7. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕೆಲವು ಪ್ರಕರಣಗಳನ್ನು ವಿಚಾರಣ ಮಾಡಿ ಅರ್ಹರೆಂದು ವರದಿ ಸಲ್ಲಿಸಿದ ಪ್ರಕರಣಗಳನ್ನು ನಿಯಮಾನುಸಾರ ಇತ್ಯರ್ಥಪಡಿಸತಕ್ಕದು. ಶಾಲಾ ದಾಖಲಾತಿಯನ್ನು ಸಾಕ್ಷವೆಂದು ಪರಿಗಣಿಸತಕ್ಕದು

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅರ್ಹರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ, ಸಿಂಧು ಪ್ರಮಾಣ ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ