ಬೆಂಗಳೂರು: ರಾಷ್ಟ್ರಕವಿ ಕುವೆಂಪು (Kuvempu) ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ (X) ನಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶ ಹಂಚಿಕೊಂಡಿದ್ದಾರೆ.
ಜಾತಿ, ಧರ್ಮ,ಪಂಥಗಳ ಎಲ್ಲೆಗಳನ್ನು ಮೀರಿ ‘ವಿಶ್ವಮಾನವ’ನಾಗುವ ಮೂಲಕವೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಸಾಹಿತ್ಯ ಮತ್ತು ಬದುಕಿನ ಮೂಲಕ ತೋರಿಸಿಕೊಟ್ಟವರು ರಾಷ್ಟ್ರ ಕವಿ ಕುವೆಂಪುರವರು. ಕುವೆಂಪು ಅವರಲ್ಲಿ ಓರ್ವ ಗುರು, ದಾರ್ಶನಿಕ, ಸಮಾಜ ಸುಧಾರಕನನ್ನು ಕಂಡಿದ್ದೇನೆ. ಅವರ ಬರಹಗಳನ್ನು ಇಂದಿನ ಯುವ ಜನಾಂಗ ಓದಿ ವಿಶ್ವಮಾನವರಾಗಬೇಕು ಎಂದು ಸಿಎಂ ಹೇಳಿದ್ದಾರೆ.
ಜಗದ ಕವಿ – ಯುಗದ ಕವಿಗೆ ನನ್ನ ಕೋಟಿ ನಮನಗಳು ಎಂದು ಸಿಎಂ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ.
ಡಿ. 29 ನ್ನು ರಾಜ್ಯದಲ್ಲಿ ವಿಶ್ವಮಾನವ ದಿನ ಎಂದು ಆಚರಿಸಲಾಗುತ್ತದೆ.