ತುಮಕೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(Education minister Madhu Bangarappa) ತುಮಕೂರಿನ ನಂದಿಹಳ್ಳಿಯ ಹೆದ್ದಾರಿಯಲ್ಲಿ ನಿನ್ನೆ ಬುಧವಾರ ಮಧ್ಯರಾತ್ರಿ ಸುಮಾರಿಗೆ ಅಪಘಾತವಾಗಿದೆ. ಚಲಿಸುತ್ತಿದ್ದ ಲಾರಿಗೆ ಕಾರು ಹಿಂಭಾಗದಿಂದ ಗುದ್ದಿದ್ದು, ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಕಾರಿನಲ್ಲಿ ಸಚಿವರು ಸೇರಿ ಮೂವರು ಪ್ರಯಾಣಿಸುತ್ತಿದ್ದು, ಎಲ್ಲರೂ ಬಚಾವ್ ಆಗಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮಾರ್ಗ ಮಧ್ಯೆ ಈ ದುರಂತ ಸಂಭವಿಸಿದ್ದು ಬದಲಿ ವಾಹನ ವ್ಯವಸ್ಥೆ ಮಾಡಿಕೊಂಡು ಸಚಿವರು ಬೆಂಗಳೂರಿಗೆ ತೆರಳಿದ್ದಾರೆ.
Laxmi News 24×7