Breaking News

ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್​ ಪ್ರಕರಣ

Spread the love

ನವದೆಹಲಿ/ ಮಂಗಳೂರು: ದೇಶದಲ್ಲಿ ಚಳಿ ಹೆಚ್ಚಿದಂತೆ ಕೋವಿಡ್​​ ಪ್ರಕರಣಗಳ ಏರಿಕೆ ಕಂಡಿದೆ.

ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್​ ರೂಪಾಂತರ ತಳಿ ಜೆಎನ್​.1 ಪತ್ತೆಯಾದ ಕೇರಳದಲ್ಲಿ ಡಿಸೆಂಬರ್​ 20ರಂದು ಒಟ್ಟು 300 ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಇದೀಗ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2669 ಆಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಕೋವಿಡ್​ ಪತ್ತೆಯಾದಗಿನಿಂದ ಕೇರಳದಲ್ಲಿ ಕೋವಿಡ್​ನಿಂದ ಸಾವನ್ನಪ್ಪಿರುವವರ ಸಂಖ್ಯೆ 72,056 ಆಗಿದೆ. ಇನ್ನು ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಕೋವಿಡ್​ನಿಂದ ಚೇತರಿಕೆ ಕಂಡು ಡಿಸ್ಚಾರ್ಜ್​ ಆದವರ ಸಂಖ್ಯೆ 224 ಆಗಿದೆ. ರಾಜ್ಯದಲ್ಲಿ ಒಟ್ಟು 68,37,203 ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿದೆ.

ಕೇರಳದಲ್ಲಿ ಕೋವಿಡ್​ ಉಲ್ಬಣ ಆಗುತ್ತಿರುವ ಕುರಿತು ಮಾತನಾಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್​​, ಸೋಂಕಿನ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಇದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಕೋವಿಡ್​ ರೋಗಿಗಳಿಗಾಗಿ ಐಸೋಲೇಷನ್​ ವಾರ್ಡ್​​, ರೂಂ, ಆಕ್ಸಿಜನ್​ ಬೆಡ್​, ಐಸಿಯು ಬೆಡ್​​ ಮತ್ತು ವೆಂಟಿಲೇಟರ್​ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಕೋವಿಡ್​ ಪ್ರಕರಣದಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇರಳ, ಕರ್ನಾಟಕ ಮತ್ತು ಒಡಿಸ್ಸಾದಲ್ಲಿ ದಾಖಲಾಗುತ್ತಿದೆ.

ಮಂಗಳೂರಿನಲ್ಲಿ ವೃದ್ಧನಿಗೆ ಕೋವಿಡ್​ ಪಾಸಿಟಿವ್​: ಮಂಗಳೂರಿನಲ್ಲಿ 82 ವರ್ಷದ ವೃದ್ಧನಲ್ಲಿ ಕೋವಿಡ್​ ಪಾಸಿಟಿವ್​ ಕಂಡು ಬಂದಿದೆ. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ವೈದ್ಯಾಧಿಕಾರಿ ಡಾ. ಹೆಚ್ ಆರ್​ ತಿಮ್ಮಯ್ಯ ದೃಢಪಡಿಸಿದ್ದಾರೆ. ವೃದ್ಧ ಮೂಲತಃ ಉಡುಪಿಯವರಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.​


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ