ಗದಗ: ಮುಖ್ಯಮಂತ್ರಿ (CM) ಸಿದ್ದರಾಮಯ್ಯ (siddaramaiah) ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ (helicopter landing) ವೇಳೆ ಗೊಂದಲವಾದ ಘಟನೆ ಗದಗದಲ್ಲಿ (gadag) ಭಾನುವಾರ ನಡೆದಿದೆ.
ಬಾಲಕಿಯರ ಬಾಲ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು.
ಈ ವೇಳೆ ಎರಡು ಹೆಲಿಕಾಪ್ಟರ್ ಗಳಿದ್ದು, ಲ್ಯಾಂಡಿಂಗ್ ವೇಳೆ ಪೈಲೆಟ್ ಗಳಲ್ಲಿ ಗೊಂದಲ ಉಂಟಾಗಿತ್ತು.
ಹೆಲಿಪ್ಯಾಡ್ ಗೆ ಮೊದಲು ಆಗಮಿಸಿದ ಒಂದು ಹೆಲಿಕಾಪ್ಟರ್ ಅರ್ಧ ಇಳಿಸಿ ಮತ್ತೆ ಮೇಲೆ ಹಾರಿತು. ಬಳಿಕ ಇನ್ನೊಂದು ಹೆಲಿಕಾಪ್ಟರ್ ಹತ್ತಿರದಲ್ಲಿದ್ದ ಇನ್ನೊಂದು ಹೆಲಿಪ್ಯಾಡ್ ನಲ್ಲಿ ಇಳಿಯಿತು.
ಮುಖ್ಯಮಂತ್ರಿಯವರ ಸ್ವಾಗತಕ್ಕೆ ಆಗಮಿಸಿದ್ದ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರಿಗೆ ಇದು ಗೊಂದಲ ಉಂಟು ಮಾಡಿತು.