Breaking News

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟಗೊಂಡಿದ್ದು, ಆಟಗಾರರ ಪಟ್ಟಿ ಇಲ್ಲಿದೆ.

Spread the love

ಹೈದರಾಬಾದ್​: ದಕ್ಷಿಣ​ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಮಾದರಿಯ ಸರಣಿಗಾಗಿ ಭಾರತ ತಂಡ ಪ್ರಕಟವಾಗಿದೆ. ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಟೀಂ ಇಂಡಿಯಾವನ್ನು ಘೋಷಿಸಿದರು.

 

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಮೂರು ಏಕದಿನ, ಮೂರು ಟಿ20, ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಸೂರ್ಯಕುಮಾರ್ ಯಾದವ್​ಗೆ ಟಿ20 ನಾಯಕತ್ವವ ಹಸ್ತಾಂತರಿಸಲಾಗಿದ್ದು, ಕೆಎಲ್ ರಾಹುಲ್​ಗೆ ಏಕದಿನ ಸರಣಿ ನಾಯಕತ್ವ, ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಲಾಗಿದೆ. ಟಿ20 ಮತ್ತು ಏಕದಿನ ಪಂದ್ಯಗಳಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಉಳಿದಂತೆ ವೇಗಿ ಮೊಹಮ್ಮದ್ ಶಮಿ ಸದ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಅವರ ಲಭ್ಯತೆ ಫಿಟ್‌ನೆಸ್ ಮೇಲೆ ಅವಲಂಬಿತವಾಗಿದೆ.

ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ), ಜಿತೇಶ್ ಶರ್ಮಾ (ವಿ,ಕೀ), ರವೀಂದ್ರ ಜಡೇಜಾ (ಉ.ನಾ), ವಾಷಿಂಗ್ಟನ್ ಸುಂದರ್​, ರವಿ ಬಿಷ್ಣೋಯ್, ಕುಲ್ದೀಪ್​ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

ಏಕದಿನ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾ ಮತ್ತು ವ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ದೀಪಕ್ ಚಾಹರ್.

ಟೆಸ್ಟ್‌ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿ,ಕೀ), ಕೆಎಲ್ ರಾಹುಲ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹ್ಮದ್​ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉ.ನಾ), ಪ್ರಸಿದ್ಧ್ ಕೃಷ್ಣ, ಶಮಿ*.

ಪಂದ್ಯಗಳ ಸ್ಥಳ ಮತ್ತು ದಿನಾಂಕ

ಟಿ20 ಸರಣಿ

  • 1ನೇ ಟಿ20, ಡಿಸೆಂಬರ್ 10, ಕಿಂಗ್ಸ್‌ಮೀಡ್ ಮೈದಾನ, ಡರ್ಬನ್
  • 2ನೇ ಟಿ20, ಡಿಸೆಂಬರ್ 12, ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾ
  • 3ನೇ ಟಿ20, ಡಿಸೆಂಬರ್ 14, ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್

ಏಕದಿನ ಸರಣಿ

  • 1ನೇ ODI, ಡಿ.17, ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್
  • 2ನೇ ODI, ಡಿ.19, ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾ
  • 3ನೇ ODI, ಡಿ.21, ಬೋಲ್ಯಾಂಡ್ ಪಾರ್ಕ್, ಪಾರ್ಲ್

ಟೆಸ್ಟ್​ ಸರಣಿ

  • 1ನೇ ಟೆಸ್ಟ್​, ಡಿ.26 ರಿಂದ ಡಿ.30,ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್
  • 2ನೇ ಟೆಸ್ಟ್​, ಜ.3 ರಿಂದ ಜ.7,ನ್ಯೂಲ್ಯಾಂಡ್ಸ್, ಕೇಪ್ ಟೌನ್

Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ