ಬೆಂಗಳೂರು : ಹಸುಗೂಸುಗಳ ಮಾರಾಟ ದಂಧೆ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಕಲಿ ವೈದ್ಯ ಕೆವಿನ್ ಹಾಗೂ ಮಧ್ಯವರ್ತಿಯಾಗಿದ್ದ ರಮ್ಯಾ ಎಂಬುವರನ್ನ ಬಂಧಿಸಲಾಗಿದೆ. ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ.
ರಾಜಾಜಿನಗರದಲ್ಲಿ ತನ್ನದೇ ಕ್ಲಿನಿಕ್ ನಡೆಸುತ್ತಿದ್ದ ಕೆವಿನ್, ರೋಗಿಗಳಿಗೆ ಚಿಕಿತ್ಸೆ ಸಹ ನೀಡುತ್ತಿದ್ದ. ಆದರೆ, ಮೂರನೇ ವರ್ಷದ ಎಂಬಿಬಿಎಂಸ್ ಫೇಲ್ ಆಗಿದ್ದ ಕೆವಿನ್, ತಾನೊಬ್ಬ ಡಾಕ್ಟರ್ ಅಂತ ಹೇಳಿಕೊಂಡಿದ್ದ. ಅಲ್ಲದೇ ಹಸುಗೂಸುಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ. ಮಕ್ಕಳನ್ನ ಖರೀದಿಸುವವರ ಬಳಿ ಹಣ ಪಡೆದು ನಕಲಿ ಸರ್ಟಿಫಿಕೆಟ್ ತಯಾರಿಸಿ ಕೊಡುವ ಕೆಲಸವನ್ನ ಕೆವಿನ್ ನೋಡಿಕೊಳ್ಳುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.