Breaking News

ವಿಜಯಪುರ ನಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಐದಾರು ಮಕ್ಕಳ ಮೇಲೆ ದಾಳಿ

Spread the love

ವಿಜಯಪುರ, ನವೆಂಬರ್ 28: ವಿಜಯಪುರ ನಗರದಲ್ಲಿ (Vijayapura)ಬೀದಿ ನಾಯಿಗಳ(Street Dogs) ಕಾಟ ಜೋರಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಬೀಡು ಬಿಟ್ಟಿರೋ ನಾಯಿಗಳು ಪುಟ್ಟ ಪುಟ್ಟ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿವೆ. ಸೋಮವಾರದಿಂದ ನಗರದ ಬಡಿಕಮಾನ್, ಬಾಗಾಯತ್ ಗಲ್ಲಿ, ದೌಲತ್ ಕೋಟೆ ಹಾಗೂ ಭಾಂಗಿ ಆಸ್ಪತ್ರೆ ಪ್ರದೇಶಗಳಲ್ಲಿ ಬೀದಿ ಬದಿಯ ನಾಯಿಗಳು ಆರೇಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿವೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಕಳೆದ ಆಗಸ್ಟ್​​​​ನಲ್ಲೇ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಆಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಾಲ್ವರು ಪುಟ್ಟ ಮಕ್ಕಳಳನ್ನು ಕಚ್ಚಿದ್ದ ಬೀದಿ ಬದಿಯ ನಾಯಿಗಳು ಮಂಗಳವಾರ ಸಹ ತಮ್ಮ ಅಟ್ಟಹಾಸವನ್ನು ಮುಂದುವರೆಸಿವೆ. ಮಂಗಳವಾರ ಮೂವರು ಮಕ್ಕಳನ್ನು ಕಚ್ಚಿದ್ದು ಜನರು ಭಯಗೊಳ್ಳುವಂತಾಗಿದೆ. ನಗರದ ಬಡೀ ಕಮಾನ್, ಬಾಗಾಯತ್ ಗಲ್ಲಿ, ಬಾಂಗೀ ಆಸ್ಪತ್ರೆ ಬಳಿ, ದೌಲತ್ ಕೋಟೆ, ಹಕೀಂ ಚೌಕ್ ನ ಸುತ್ತಮುತ್ತ ಬೀದಿಬದಿಯ ನಾಯಿಗಳ ಕಾಟ ಜೋರಾಗಿದೆ. ಶಾಲೆಗೆ ಹೋಗುವ 8 ವರ್ಷದೊಳಗಿನ ಮಕ್ಕಳನ್ನೇ ಗುರಿಯಾಗಿಸೋ ಬೀದಿ ನಾಯಿಗಳು ಮಕ್ಕಳನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಮನೆಯಾಚೆ ಅಂಗಡಿಗೆ ಹೋಗುವಾಗಲೂ ನಾಯಿಗಳು ಅಟ್ಯಾಕ್ ಮಾಡಿವೆ. ನಿನ್ನೆ ನಾಲ್ಕು ಪುಠಾಣಿಗಳ ಮೇಲೆ ಕ್ರೌರ್ಯ ಮಾಡಿದ್ದ ಬೀದಿನಾಯಿಗಳು ಇಂದು ಮತ್ತೇ ಮೂವರು ಮಕ್ಕಳನ್ನು ಕಚ್ಚಿವೆ. ಬೀದಿನಾಯಿಗಳ ದಾಳಿಗೆ ಈ ಭಾಗದ ಮಕ್ಕಳು ಶಾಲೆಗೆ ಹೋಗಲು ಸಹ ಭಯಪಡುತ್ತಿದ್ದಾರೆ. ಮಕ್ಕಳನ್ನು ಪೋಷಕರು ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ಮನೆಯಾಚೆ ಕಳುಹಿಸುವುದನ್ನೇ ಬಿಟ್ಟಿದ್ದಾರೆ. ನಿನ್ನೆ ಹಾಗೂ ಇಂದು ಬೀದಿ ನಾಯಿಗಳ ಕಡಿತಕ್ಕೊಳಗಾದ ಏಳು ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರಿಗೂ ರೆಬೀಸ್ಲಸಿಕೆ ಹಾಕಿ ಉಪಚಾರ ಮಾಡಲಾಗಿದೆ. ಇಷ್ಟೆಲ್ಲಾ ಆವಾಂತರವಾದರೂ ಮಹಾನಗರ ಪಾಲಿಕೆಯವರಾಗಲಿ ಜಿಲ್ಲಾಡಳಿತದ ಆಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸದೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಸಮಾಧಾನ ಹೊರ ಹಾಕಿದ್ದಾರೆ.


Spread the love

About Laxminews 24x7

Check Also

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್, ಕಾಮೆಂಟ್ ಮಾಡುವವರಿಗೆ ರಾಜ್ಯ ಪೊಲೀಸರ ಎಚ್ಚರಿಕೆ

Spread the loveಬೆಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ಮನಸೋ ಇಚ್ಚೆ ಪೋಸ್ಟ್, ಕಾಮೆಂಟ್ ಮಾಡುವುದನ್ನು ಕರ್ನಾಟಕ ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ