ಬೆಂಗಳೂರು: ಮಗಳನ್ನು ಪ್ರೀತಿಸುವಂತೆ (Love) ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ. ಡೇವಿಡ್ ಕೊಲೆಯಾದ ಯುವಕ. ಮಂಜುನಾಥ್ ಎಂಬವರ ಮಗಳನ್ನು ಡೇವಿಡ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಒಂದೂವರೆ ವರ್ಷದ ಹಿಂದೆ ರಾಜಿ ಪಂಚಾಯ್ತಿಯೂ ನಡೆದಿತ್ತು.
ಮಗಳ ತಂಟೆಗೆ ಬರದಂತೆ ಡೇವಿಡ್ಗೆ ಎಚ್ಚರಿಕೆ ನೀಡಲಾಗಿತ್ತು. ಆದ್ರೂ ಡೇವಿಡ್ ತನ್ನ ಚಾಳಿಯನ್ನು ನಿಲ್ಲಿಸಿರಲಿಲ್ಲ. ಮದುವೆ ಮಾಡಿಕೊಡಿ ಇಲ್ಲವಾದ್ರೆ ಖಾಸಗಿ ಫೋಟೋಗಳನ್ನು (Private Photo) ರಿವೀಲ್ ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ದನು. ಇದರಿಂದ ಕೋಪಗೊಂಡ ಮಂಜುನಾಥ್ ಪ್ಲಾನ್ ಮಾಡಿ ಡೇವಿಡ್ ಉಸಿರು ನಿಲ್ಲಿಸಿದ್ದಾರೆ.
ಮದುವೆ ವಿಷಯ ಮಾತನಾಡೋಣ ಬಾ ಎಂದು ಕರೆಸಿ ರಾಡ್ ನಿಂದ ಹೊಡೆದು ಚಾಕು ಹಾಕಿ ನಂತರ ಹಾಲೋ ಬ್ರಿಕ್ಸ್ ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಆರೋಪಿ ಮಂಜುನಾಥ್ ಬಂಧನವಾಗಿದ್ದು, ಘಟನೆ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
40 ಲಕ್ಷ ಕಳ್ಳತನ
ಬೆಂಗಳೂರಿನಲ್ಲಿ ಪ್ರದೀಪ್ ಕುಮಾರ್ ಎಂಬಾತ ಮಗಳನ್ನ ಹೊತ್ತೊಯ್ದಿದಲ್ಲದೇ ಮನೆಯಲ್ಲಿದ್ದ ವಸ್ತುಗಳನ್ನೂ ಕದ್ದೊಯ್ದಿದ್ದ. ಈತನನ್ನ ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಒಂದೂವರೆ ವರ್ಷದಿಂದ ರೆಜಿನಾ ಎಂಬುವರ ಮಗಳನ್ನ ಆರೋಪಿ ಪ್ರೀತಿಸಿದ್ದು, ಬಳಿದ ಆಕೆಯನ್ನ ಕರೆದುಕೊಂಡು ಓಡಿ ಹೋಗಿದ್ದ. ಆದ್ರೆ ಅತ್ತೆ ಕನ್ಯಾಕುಮಾರಿಗೆ ಹೋಗಿದ್ದಾಗ ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ಕಳ್ಳತನ ಮಾಡಿದ್ದ. ಸ್ಥಳಿಯರ ಸಹಾಯದಿಂದ ಆರೊಪಿಯನ್ನ ಬಂಧಿಸಲಾಗಿದೆ.
ಬೆಂಗಳೂರಿನ ಗೋವಿಂದರಾಜನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 1 ಕೆಜಿ 215 ಗ್ರಾಂ ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ. ಒಟ್ಟು 80 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಾರ್ತಿಕ್‌ನನ್ನ ಬಂಧಿಸಲಾಗಿದೆ.
ಪಂಚರ್ ಮಾಡಿ 3 ಲಕ್ಷ ಕದ್ರು!
ಗಮನ ಬೇರೆಡೆ ಸೆಳೆದು 3 ಲಕ್ಷ ಹಣವನ್ನ ಕಳ್ಳರು ಎಗ್ಗರಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿಯಲ್ಲಿ ನವೆಂಬರ್ 13ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.