Breaking News

ಸರ್ಕಾರಿ ನಿವಾಸ, ಕಚೇರಿಗಳ ನವೀಕರಣಕ್ಕೆ ರಾಜ್ಯ ಸರ್ಕಾರದಿಂದ ದುಂದುವೆಚ್ಚ; ಯತ್ನಾಳ್

Spread the love

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Govt) ಸರ್ಕಾರಿ ನಿವಾಸ ಮತ್ತು ಕಚೇರಿಗಳ ನವೀಕರಣದ ನೆಪದಲ್ಲಿ ದುಂದುವೆಚ್ಚ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಸನ ಗೌಡ ಪಾಟೀಲ ಯತ್ನಾಳ್, ಭೀಕರ ಬರಗಾಲದ ನಡುವೆಯೂ ಸಿಎಂ ಮತ್ತು ಸಚಿವರದ್ದು ಬಿಂದಾಸ್ ದುನಿಯಾ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಸಿಎಂ ಮತ್ತು ಸಚಿವರ ಸರ್ಕಾರಿ ನಿವಾಸ‌ ನವೀಕರಣಕ್ಕೆ ದುಂದುವೆಚ್ಚ ಮಾಡಿರುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್‌ನಲ್ಲಿ ಪಟ್ಟಿ ಮಾಡಿ ಪೋಸ್ಟ್ ಮಾಡಿದ್ದಾರೆ.

ಸಿಎಂ ಮನೆ ನವೀಕರಣಕ್ಕೆ ₹3 ಕೋಟಿ, ಸಿಎಂ ಕಚೇರಿ ನವೀಕರಣಕ್ಕೆ ₹50 ಲಕ್ಷ ವೆಚ್ಚ, ಡಿಸಿಎಂ ಕಚೇರಿ ನವೀಕರಣಕ್ಕೆ ₹50 ಲಕ್ಷ  ವೆಚ್ಚ, ಡಿಸಿಎಂ ಮನೆ ನವೀಕರಣಕ್ಕೆ ₹50 ಲಕ್ಷ ವೆಚ್ಚ ಮಾಡಲಾಗಿದೆ. ಡಾ. ಜಿ. ಪರಮೇಶ್ವರ್‌ ಕಚೇರಿ ನವೀಕರಣಕ್ಕೆ ₹15 ಲಕ್ಷ ವೆಚ್ಚ, ಡಾ. ಜಿ. ಪರಮೇಶ್ವರ್‌ ಮನೆ ನವೀಕರಣಕ್ಕೆ ₹35 ಲಕ್ಷ ವೆಚ್ಚ ಮಾಡಲಾಗಿದೆ.


Spread the love

About Laxminews 24x7

Check Also

ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಅನ್ನೋದು ತಪ್ಪು: ಪಂಡಿತಾರಾಧ್ಯಶ್ರೀ ಅಭಿಪ್ರಾಯ ವಿರೋಧಿಸಿದ ವಚನಾನಂದಶ್ರೀ

Spread the loveಚಿತ್ರದುರ್ಗ, ಸೆಪ್ಟೆಂಬರ್ 7: ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ