Breaking News

ಹಾವಿನ ಜತೆ ಕೀಟಲೇ ,ಹಾವು ಕಚ್ಚಿ ಸಾವನ್ನಪ್ಪಿದ್ದ ಯುವ ರೈತ;

Spread the love

ಹಾಸನ: ಹಾವಿನ ದ್ವೇಷ 12 ವರ್ಷ ಎಂಬ ಮಾತಿದೆ. ಆದರೆ, ಈ ಒಂದು ಪ್ರಕರಣದಲ್ಲಿ 12 ದಿನಗಳ ಬಳಿಕ ದ್ವೇಷ ಸಾಧಿಸಿತಾ ಎಂಬ ಅನುಮಾನ ಕಾಡುತ್ತಿದೆ ಎಂಬ ಮಾತು ಸ್ಥಳೀಯರ ಬಾಯಿಂದ ಕೇಳಿ ಬರುತ್ತಿದೆ.

ಇದಕ್ಕೆ ಇಂಬು ನೀಡುವಂತೆ ವಿಡಿಯೋವೊಂದು ವೈರಲ್​ ಕೂಡಾ ಆಗಿದೆ.

ಅದು ಅ.29 ರಂದು ಹೊಳೆನರಸೀಪುರ ತಾಲೂಕಿನ ದೇವರಗುಡ್ಡೆನ ಹಳ್ಳಿಯಲ್ಲಿ ಯುವ ರೈತನೋರ್ವನಿಗೆ ವಿಷಪೂರಿತ ಹಾವು ಕಚ್ಚಿ ಮೃತಪಟ್ಟಿದ್ದ ಸುದ್ದಿ ಪ್ರಕಟವಾಗಿತ್ತು. ಆದರೆ ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಹಾವು ಕಚ್ಚಿ ಯುವಕ ಸಾವನ್ನಪಿದನಾ ಅಥವಾ ಹಾವಿಗೆ ತೊಂದರೆ ಕೊಟ್ಟಿದ್ದರಿಂದ ಹಾವು ಕಚ್ಚಿತ್ತಾ ಎಂಬ ಅನುಮಾನ ಹುಟ್ಟಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ಆ ಭಾಗದಲ್ಲಿ ಭಾರಿ ಸದ್ದು ಮಾಡುತ್ತಿದೆ.

ದೇವರಗುಡ್ಡೇನಹಳ್ಳಿ ಗ್ರಾಮದ ಅಭಿಲಾಷ್​ ಎಂಬ ಯುವ ರೈತ ಹಾವು ಕಚ್ಚಿ ಸಾವಿಗೀಡಾಗಿದ್ದ. ಇದಕ್ಕೆ ಸ್ಥಳೀಯ ಶಾಸಕ ಮಾಜಿ ಸಚಿವ ರೇವಣ್ಣ ಕೂಡಾ ನೋವಿನ ಸಂಗತಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದ್ದರು. ಆದರೆ, ಹಾವು ಕಚ್ಚಿ ಸಾಯುವ 12 ದಿನ ಮುನ್ನ ಎಂದಿನಂತೆ ತನ್ನ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ, ನಾಗರಹಾವೊಂದು ಪೈಪ್​ನಿಂದ ಹೊರಬಂದಿದೆ. ಅದನ್ನು ಕಂಡ ಅಭಿಲಾಷ್ ಅದಕ್ಕೆ ಸ್ವಲ್ಪ ಸಮಯ ಕೀಟಲೆ ಮಾಡಿದ್ದಾನೆ. ಪೈಪ್​ನಿಂದ ಅದನ್ನು ಗಾಸಿಗೊಳಿಸಿದ್ದು, ಅದನ್ನು ತನ್ನ ಮೊಬೈಲ್​ನಲ್ಲಿ ಚಿತ್ರೀಕರಣ ಕೂಡಾ ಮಾಡಿಕೊಂಡಿದ್ದ ಎನ್ನಲಾಗಿದೆ.

ಮೃತ ಪಟ್ಟ ಬಳಿಕ ಅಭಿಲಾಷ್​ ಮನೆಗೆ ಬಂದ ಸ್ನೇಹಿತರು, ಆತನ ಮೊಬೈಲ್​ ಪರಿಶೀಲನೆ ಮಾಡಿದಾಗ, ಹಾವಿಗೆ ಕೀಟಲೆ ಮಾಡುತ್ತಿರುವ ದೃಶ್ಯ ಕಂಡು ಬಂದಿದೆಯಂತೆ. ಪೈಪ್​ನಿಂದ ಹಾವಿಗೆ ಕೀಟಲೆ ಮಾಡಲು ಮುಂದಾದಾಗ ನಾಗರಹಾವು ಹೆಡೆ ಎತ್ತಿ ವಿರೋಧ ವ್ಯಕ್ತಪಡಿಸಿದ ದೃಶ್ಯ ಕಂಡ ಸ್ನೇಹಿತರು ಗಾಬರಿಯಾಗಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ