Breaking News

ಬೆಂಗಳೂರು ಹೊರವಲಯದ ರಸ್ತೆ, ಅಪಾರ್ಟ್​ಮೆಂಟ್​ಗಳಲ್ಲಿ ಚಿರತೆ ಓಡಾಟ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Spread the love

ಬೆಂಗಳೂರು: ನಗರದ ಹೊರವಲಯದಲ್ಲಿರುವ ಬೊಮ್ಮನಹಳ್ಳಿಯ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ಚಿರತೆ ಸಂಚಾರದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.

ಮೈಕ್ ಮೂಲಕ ಚಿರತೆ ಇದೆ‌, ಜನ ಎಚ್ಚರಿಕೆಯಿಂದ ಓಡಾಟ ಮಾಡಬೇಕು ಎಂದು ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲುಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ. ಪ್ರತಿಷ್ಠಿತ ಅಪಾರ್ಟ್​ಮೆಂಟ್​ಗಳ ಆವರಣ ಹಾಗೂ ಲೇಔಟ್​ಗಳಲ್ಲಿ ಸಂಚಾರ ಮಾಡಿದೆ. ಕತ್ತಲಾಗುತ್ತಿದ್ದಂತೆ ಅಪಾರ್ಟ್​ಮೆಂಟ್​ನ ಮೆಟ್ಟಿಲು, ಲಿಫ್ಟ್ ಹಾಗೂ ಪಾರ್ಕಿಂಗ್ ಏರಿಯಾಗಳಲ್ಲಿ ಚಿರತೆ ಓಡಾಡಿದೆ. ಇದರ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿವೆ.

ಸ್ಥಳೀಯ ನಿವಾಸಿ ವೇಣು ಎಂಬವರು ಮಾತನಾಡಿ, ”ಚಿರತೆ ಎಇಸಿಎಸ್ ಲೇಔಟ್​, ಕೂಡ್ಲುಭಾಗ, ಸಿಂಗಸಂದ್ರ, ಹೊಂಗಸಂದ್ರ, ಹೊಸಪಾಳ್ಯದೆಲ್ಲೆಲ್ಲ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸೆರೆ ಹಿಡಿಯಬೇಕು. 27ರಂದು ರಾತ್ರಿ 10 ಗಂಟೆಗೆ ಎಂ.ಎಸ್.ಧೋನಿ ಸ್ಕೂಲ್ ಹತ್ತಿರ ಕಾಣಿಸಿತ್ತು. 29ರಂದು ರಾತ್ರಿ​ 2 ಗಂಟೆ 55 ನಿಮಿಷಕ್ಕೆ ಹೊಂಗಸಂದ್ರ ಭಾಗದಲ್ಲಿ ಗೋಚರಿಸಿದೆ” ಎಂದರು.

ಮತ್ತೋರ್ವ ಸ್ಥಳೀಯ ನಿವಾಸಿ ಪರಮೇಶ್​ ಮಾತನಾಡಿ, “ಚಿರತೆ ಓಡಾಟದ ಬಗ್ಗೆ ಸಿಸಿಟಿವಿಯಲ್ಲಿ ಚೆಕ್​ ಮಾಡಿದ್ದಾರೆ. ಡ್ರೋನ್ ಬೇಕು ಅನ್ನುತ್ತಿದ್ದಾರೆ. ಇಲ್ಲಿ ಸಾರ್ವಜನಿಕರು ಜಾಸ್ತಿ ಇದ್ದಾರೆ. ಬೆಳಿಗ್ಗೆ ವಯಸ್ಸಾದವರು ವಾಕ್​ಗೆ ಬರುತ್ತಾರೆ. ಹಾಗಾಗಿ ಸ್ಥಳೀಯ ಅಧಿಕಾರಿಗಳು ಸ್ವಲ್ಪ ಕೇರ್​ ತೆಗೆದುಕೊಂಡರೆ ಎಲ್ಲರಿಗೂ ಒಳ್ಳೆಯದು. ಈ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು” ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

Spread the love ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ